ನಿತ್ಯಾನಂದ.. ವಿವಾದಗಳೇ ಈತನಿಗೆ ಭೂಷಣ. ಸ್ವಯಂ ಘೋಷಿತ ಈ ದೇವ ಮಾನವ ಕಳೆದ ತಿಂಗಳಷ್ಟೇ ಸಮಾಧಿ, ಸಾವು ಅಂತೇಲ್ಲಾ ಜನರ ತಲೆಗೆ ಹುಳ ಬಿಟ್ಟಿದ್ದ. ಇದೀಗ ನ್ಯಾಯಾಲಯ ನಿತ್ಯಾನಂದನ ತಲೆ ಬಿಸಿಯನ್ನ ಹೆಚ್ಚಿಸಿದೆ. ದಶಕಗಳ ಹಿಂದೆ ಈತ ಮಾಡಿದ್ದ ಕರ್ಮವೊಂದು ಕೈಲಾಸದಲ್ಲಿದ್ರೂ ಬಿಡದೇ ಬೆನ್ನುಹತ್ತಿದೆ. ಅದು 2010. ಮಾರ್ಚ್ ಬಿಡದಿ ಬಳಿಯ ಧ್ಯಾನಪೀಠದಿಂದ ಕೆಲ ಸೆಕೆಂಡ್ಗಳ ವಿಡಿಯೋ ಒಂದು ಹಲ್ಚಲ್ ಎಬ್ಬಿಸಿತ್ತು. ನಿತ್ಯಾನಂದನ ರಾಸಲೀಲೆ ವಿಡಿಯೋ ಇಡೀ ದೇಶದಲ್ಲೇ ಸಂಚಲನ ಸೃಷ್ಟಿಸಿತ್ತು. ಸ್ವಯಂ ಘೋಷಿತ ದೇವಮಾನವ ನಿತ್ಯಾನಂದನನ್ನ ಕೋರ್ಟ್ ಕಟಕಟೆಗೆ ತಂದು ನಿಲ್ಲಿಸಿತ್ತು. ಇದೀಗ ಕೈಲಾಸ ದೇಶದಲ್ಲಿ ಭಕ್ತಗಣದ ಮಧ್ಯೆ ಭಾಷಣ ಬಿಗಿಯೋ ನಿತ್ಯಾನಂದನಿಗೆ ದಶಕಗಳ ಹಿಂದಿನ ಕರ್ಮವೊಂದು ಮತ್ತೆ ಸುತ್ತಿಕೊಂಡಿದೆ.
ಭಕ್ತೆ ಮೇಲೆ ನಿತ್ಯಾನಂದ ಅತ್ಯಾಚಾರ ಆರೋಪ ಕೇಸ್:
ನಿತ್ಯಾನಂದ ಮತ್ತು ತಮಿಳು ನಟಿಯೊಬ್ಬಳು ಜೊತೆಗಿದ್ದ ಖಾಸಗಿ ದೃಶ್ಯಗಳು ಎಲ್ಲೆಡೆ ಸದ್ದು ಮಾಡಿತ್ತು. ಅಲ್ಲದೇ ಈ ನಟಿಯ ಮೇಲೆ ನಿತ್ಯಾನಂದ ಆತ್ಯಾಚಾರವೆಸಗಿರೋ ಆರೋಪ ಕೇಳಿ ಬಂದಿತ್ತು. ಇದೇ ವಿಚಾರವಾಗಿ ಬಿಡದಿಯಲ್ಲಿ ಭಾರೀ ಹೈಡ್ರಾಮಾಗಳೇ ನಡೆದು ಹೋಗಿತ್ತು. ಇದೀಗ ನಿತ್ಯಾನಂದನ ಹಳೇ ಕೇಸ್ ರೀ ಓಪನ್ ಆಗಿದೆ. ನಿತ್ಯಾನಂದನ ಬಂಧನಕ್ಕೆ ಜಾಮೀನು ರಹಿತ ವಾರೆಂಟ್ ಜಾರಿಯಾಗಿದೆ. ನಿತ್ಯಾನಂದ ಎಲ್ಲೇ ಇದ್ರೂ ಬಂಧಿಸಿ ಕಟಕಟೆಗೆ ತಂದು ನಿಲ್ಲಿಸಿ ಅಂತಾ ನ್ಯಾಯಾಲಯ ಆದೇಶಿಸಿದೆ.
ಅತ್ಯಾಚಾರ ಪ್ರಕರಣ ಸಂಬಂಧ ಈಗಾಗಲೇ ಕೋರ್ಟ್ ಟ್ರಯಲ್ ಆರಂಭವಾಗಿದೆ. ಆದ್ರೆ, ಈ ಕೇಸ್ನ 4ನೇ ಆರೋಪಿ ಮತ್ತು 6ನೇ ಆರೋಪಿ ಮಾತ್ರ ಕೋರ್ಟ್ಗೆ ಹಾಜರಾಗಿದ್ದಾರೆ. ಈ ಕೇಸ್ನ ಪ್ರಮುಖ ಆರೋಪಿಯಾಗಿರೋ ನಿತ್ಯಾನಂದ ಮತ್ತು ಆತನ ಆಪ್ತರು ನಾಪತ್ತೆಯಾಗಿದ್ದಾರೆ. ಇನ್ನೂ ಈಗಾಗಲೇ ಪ್ರಾಥಮಿಕ ಜಾಮೀನನ್ನ ಹೈಕೋರ್ಟ್ ರದ್ದು ಮಾಡಿತ್ತು. ಹೀಗಾಗಿ ನಿತ್ಯಾನಂದನ ವಿರುದ್ದ ಓಪನ್ ಡೇಟೆಂಟ್ ವಾರೆಂಟ್ ಕೂಡಾ ಆಗಿತ್ತು. ಆದ್ರೆ, ಇಲ್ಲಿ ತನಕ ಪೊಲೀಸರಿಗೆ ಆತನನ್ನ ವಶಕ್ಕೆ ಪಡೆಯಲಾಗಿಲ್ಲ. ಹೀಗಾಗಿ ಮತ್ತೆ ನಿತ್ಯಾನಂದನ ವಿರುದ್ಧ ನಾನ್ ಬೇಲಬಲ್ ವಾರೆಂಟ್ ಜಾರಿಯಾಗಿದೆ. ಮುಂದಿನ 18ನೇ ತಾರೀಖಿನಂದು ಬಂಧಿಸಿ ಕರೆತರಲು ಸಿಐಡಿಗೆ ರಾಮನಗರ ಅಪರ ಜಿಲ್ಲಾ & ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.
ಪ್ರಕರಣದ ಆರೋಪಿಗಳು..
A1 ನಿತ್ಯಾನಂದ ಸ್ವಾಮಿ
A2 ಗೋಪಾಲ ಶೀಲಂರೆಡ್ಡಿ
A3 ಶಿವವಲ್ಲಭನೇನಿ
A4 ಧನಶೇಖರನ್
A5 ರಾಗಿಣಿ
A6 ಮಾ. ನಿತ್ಯಾನಂದ (ಜಮುನಾ ರಾಣಿ)
ಇನ್ನೂ ಅತ್ಯಾಚಾರ ಕೇಸ್ನಲ್ಲಿ ನಿತ್ಯಾನಂದ ಸ್ವಾಮಿ ಪ್ರಮುಖ ಆರೋಪಿಯಾಗಿದ್ದಾನೆ. ಇನ್ನೂ ಈತನ ಆಪ್ತರಾದ ಗೋಪಾಲ ಶೀಲಂರೆಡ್ಡಿ 2ನೇ ಆರೋಪಿ, ಮೂರನೇ ಆರೋಪಿ ಶಿವವಲ್ಲಭನೇನಿ, ನಾಲ್ಕನೇ ಆರೋಪಿ ಧನಶೇಖರನ್, ಐದನೇ ಆರೋಪಿ ರಾಗಿಣಿ ಹಾಗೂ ಆರನೇ ಆರೋಪಿಯಾಗಿ ಮಾ. ನಿತ್ಯಾನಂದ ಅಲಿಯಾಸ್ ಜಮುನಾ ರಾಣಿ ಈ ಕೇಸ್ನಲ್ಲಿ ಇನ್ವಾಲ್ ಆಗಿದ್ದಾರೆ. ಒಟ್ಟಾರೆ, ಪಾಸ್ಪೋರ್ಟ್ ಸಮೇತ ಎಸ್ಕೇಪ್ ಆಗಿದ್ದ ನಿತ್ಯಾನಂದ ಕೈಲಾಸವೆಂಬ ದೇಶವನ್ನ ಕಟ್ಟಿಕೊಂಡು ಅಲ್ಲಿ ತಾನೇ ಅಧಿಪತಿಯಾಗಿ ಮೆರೆಯುತ್ತಿದ್ದಾನೆ ಅನ್ನೋದು ಮಾಹಿತಿ. ಅಲ್ಲದೇ ಅಲ್ಲಿಂದಲೇ ತನ್ನ ಲೀಲೆಗಳ ದರ್ಶನವನ್ನೂ ಮಾಡಿಸುತ್ತಿದ್ದಾನೆ.


























