ಪುತ್ತೂರು: ಕರ್ನಾಟಕ ಇಂಟೆಗ್ರೇಟೆಡ್ ಡೆಲಪಮೆಂಟ್ ಸೊಸೈಟಿ -ಡಯೋಸಿಸ್ ಆಫ್ ಪುತ್ತೂರು ವತಿಯಿಂದ ಭಿನ್ನ ಸಾಮರ್ಥ್ಯದ ಮಕ್ಕಳಿಗಾಗಿ ಸ್ಥಾಪನೆಗೊಂಡಿರುವ ಸರ್ವೋದಯ ವಿಶೇಷ ಶಾಲೆ ಪರ್ಲಡ್ಕದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಯ ಸಂದೇಶ ಸಾರಿದರು.

ಈ ಸಂದರ್ಭದಲ್ಲಿ ಸರ್ವೋದಯ ವಿಶೇಷ ಶಾಲೆಯ ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.





























