ಮಂಗಳೂರು: ಹಿಜಾಬ್ನಿಂದ ಸುದ್ದಿಯಾಗಿದ್ದ ನಗರದ ಹಂಪನಕಟ್ಟೆಯಲ್ಲಿರುವ ಮಂಗಳೂರು ವಿವಿ ಕಾಲೇಜಿನ ತರಗತಿಯೊಂದರಲ್ಲಿ ವಿನಾಯಕ ದಾಮೋದರ ಸಾವರ್ಕರ್ ಭಾವಚಿತ್ರವನ್ನು ನಿನ್ನೆ ಅಳವಡಿಸಲಾಗಿದೆ. ಸದ್ಯ ಈ ವೀಡಿಯೋ ವೈರಲ್ ಆಗಿದೆ.

ಭಾರತಾಂಬೆಯ ಪೋಟೋದೊಂದಿಗೆ ತರಗತಿಯ ಗೋಡೆಯಲ್ಲಿ ಅಂಟಿಸಲಾಗಿದೆ. ಈ ವೀಡಿಯೋವನ್ನು ವಿದ್ಯಾರ್ಥಿಗಳೇ ಚಿತ್ರೀಕರಿಸಿದ್ದು, ನಂತರ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ವಿಷಯ ಪ್ರಾಂಶುಪಾಲೆ ಡಾ.ಅನಸೂಯ ರೈ ಗಮನಕ್ಕೆ ಬರುತ್ತಿದ್ದಂತೆ ಅದನ್ನು ತೆರವುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ಜೂ.6- ಜು.9ರ ವರೆಗೆ ಒಂದು ತಿಂಗಳು ಪುತ್ತೂರಿನಲ್ಲಿ ಶಾಪಿಂಗ್ ಫೆಸ್ಟಿವಲ್..
























