ಪುತ್ತೂರು: ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರು ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ಭಕ್ತಾಧಿಗಳು ಹಿಂದೂ ಧಾರ್ಮಿಕ ಮತ್ತು ಧರ್ಮದಾಯ ಇಲಾಖೆಗೆ ದೂರು ನೀಡಿದ್ದಾರೆ.
ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ಅರ್ಚಕರಾದ ರಮೇಶ ಬೈಪಾಡಿತ್ತಾಯ ರವರು 1 ಲಕ್ಷಕ್ಕೂ ಅಧಿಕ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ದೇವಸ್ಥಾನದ ಭಕ್ತಾಧಿಗಳು ದೂರು ನೀಡಿದ್ದಾರೆ.
ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ರಮೇಶ ಬೈಪಾಡಿತ್ತಾಯ ರವರು 2017 ರ ಜೂನ್ ತಿಂಗಳಿಂದ 2020 ರ ಜೂನ್ ತಿಂಗಳವರೆಗೆ ಆಡಳಿತ ಮಂಡಳಿಯ ನಿರ್ಣಯವಿಲ್ಲದೆಯೇ ಸುಮಾರು 1 ಲಕ್ಷಕ್ಕಿಂತಲೂ ಮಿಕ್ಕಿದ ಹಣವನ್ನು ನಗದೀಕರಿಸಿದ್ದು, ಇಲಾಖಾವತಿಯಿಂದ ಕೂಡಲೇ ತನಿಖೆ ನಡೆಸಿ ಅರ್ಚಕರು ವಸೂಲಿ ಮಾಡಿರುವ ಹಣವನ್ನು ಅರ್ಚಕರ ಕೈಯಿಂದಲೇ ದೇವಸ್ಥಾನಕ್ಕೆ ಕೊಡಿಸಬೇಕು ಮತ್ತು ಲೋಪವೆಸಗಿದ ಅರ್ಚಕರನ್ನು ಅಮಾನತು ಮಾಡಿ ನೂತನ ಅರ್ಚಕರನ್ನು ನೇಮಿಸಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕೆಲ ದಿನಗಳಿಂದ ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದು, ಕೆಲ ದಿನಗಳ ಹಿಂದೆ ವ್ಯವಸ್ಥಾಪನ ಸಮಿತಿ ಅಧ್ಯಕ್ಷರ ವಿರುದ್ಧ ದೂರು ನೀಡಿದ್ದರು. ಅದೇ ರೀತಿ ನಾಗನ ಕಟ್ಟೆಯನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸಿ ಸಾರ್ವಜನಿಕರು ಪ್ರತಿಭಟನೆಯನ್ನು ನಡೆಸಿದ್ದರು. ಪ್ರಕರಣದ ಸತ್ಯಾಂಶ ತನಿಖೆ ನಂತರವಷ್ಟೇ ತಿಳಿಯಬೇಕಿದೆ..
ಜೂ.6- ಜು.9ರ ವರೆಗೆ ಒಂದು ತಿಂಗಳು ಪುತ್ತೂರಿನಲ್ಲಿ ಶಾಪಿಂಗ್ ಫೆಸ್ಟಿವಲ್..


























