ಪುತ್ತೂರು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಮಹಾ ವಿದ್ಯಾಲಯ ಮತ್ತು ಆಸ್ಪತ್ರೆ, ಉಜಿರೆ ಹಾಗೂ ವಿಶ್ವ ಹಿಂದೂ ಪರಿಷದ್, ಮಾತೃಶಕ್ತಿ, ದುರ್ಗಾವಾಹಿನಿ ಪುತ್ತೂರು ಇದರ ಸಂಯುಕ್ತ ಆಶ್ರಯದಲ್ಲಿ ಉಚಿತ ಯೋಗ ಶಿಬಿರ ಜೂ.10 ರಿಂದ 21 ರವರೆಗೆ ರಾಧಾಕೃಷ್ಣ ಮಂದಿರ ರಸ್ತೆಯ ‘ವಜ್ರ ಸಂಜೀವಿನಿ’ ಶಿಶು ಮಂದಿರದಲ್ಲಿ ನಡೆಯಲಿದೆ.
ಬೆಳ್ಳಿಗೆ 6 -7 ಗಂಟೆಯ ತನಕ ಹಾಗೂ ಸಂಜೆ 5.30-6.30 ರವರೆಗೆ ಉಚಿತ ಯೋಗ ಶಿಬಿರ ನಡೆಯಲಿದೆ.
ದೇಹದ ಅತೀ ತೂಕ, ಮಂಡಿನೋವು, ಮೈಗ್ರೇನ್, ಮಲ ಬದ್ಧತೆ, ಮಧುಮೇಹ, ಬೆನ್ನುನೋವು, ಅಸ್ತಮಾ, ಅಧಿಕ ರಕ್ತದೊತ್ತಡ, ಸಂಧಿವಾತ, ಕಣ್ಣಿನ ಸಮಸ್ಯೆಗಳು, ಉದರ ಸಂಬಂಧಿ ಕಾಯಿಲೆಗಳನ್ನು ಯಾವುದೇ ಔಷಧಿ ಉಪಚಾರವಿಲ್ಲದೆ ಯೋಗ ಅಭ್ಯಾಸದ ಮೂಲಕ ನಿವಾರಣೆಗೊಳಿಸಬಹುದಾಗಿದೆ ಈಗಾಗಿ ಉಚಿತ ಯೋಗ ಶಿಬಿರದ ಉಪಯೋಗವನ್ನು ಪಡೆದುಕೊಳ್ಳಿ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜೂ.6- ಜು.9ರ ವರೆಗೆ ಒಂದು ತಿಂಗಳು ಪುತ್ತೂರಿನಲ್ಲಿ ಶಾಪಿಂಗ್ ಫೆಸ್ಟಿವಲ್..

























