ವಿಟ್ಲ: 2022ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶದ ಮರುಮೌಲ್ಯ ಮಾಪನದಲ್ಲಿ ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿಟ್ಲದ ಈ ಕೆಳಗಿನ ವಿದ್ಯಾರ್ಥಿಗಳು ಹೆಚ್ಚುವರಿ ಅಂಕಗಳನ್ನು ಪಡೆದಿರುತ್ತಾರೆ.

ಕುಮಾರಿ ಹರ್ಷ ಎಸ್. ರವರಿಗೆ ಮರುಮೌಲ್ಯಮಾಪನದಲ್ಲಿ ಸಮಾಜವಿಜ್ಞಾನ ವಿಷಯದಲ್ಲಿ ಮೊದಲ ಅಂಕವು 98 ಆಗಿದ್ದು ಇದೀಗ 2 ಅಂಕ ಸೇರ್ಪಡೆಯಾಗಿ ಒಟ್ಟು 100 ಅಂಕ ಗಳಿಸಿ
625 ಕ್ಕೆ 624 ಅಂಕಗಳನ್ನು ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಇವರು ಸಾಂತಪದವು ಶ್ರೀಕೃಷ್ಣ ಭಟ್ ಎಸ್ ಮತ್ತು ಜಯಶ್ರೀ ಕೆ ಆರ್ ರವರ ಪುತ್ರಿಯಾಗಿರುತ್ತಾರೆ.
ಹಾಗೆಯೇ ಕುಮಾರಿ ಅಪೂರ್ವ ಭಟ್ ಡಿ ಇವರು
ಹಿಂದಿಯಲ್ಲಿ 2 ಮತ್ತು ಗಣಿತದಲ್ಲಿ 1 ಹೆಚ್ಚುವರಿ ಅಂಕ ಪಡೆದು ಮರುಮೌಲ್ಯಮಾಪನದಲ್ಲಿ 624 ಅಂಕವನ್ನು ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಂತಾಗಿದೆ. ಇವರು ಹೆಗ್ಡೆಕೂಡಿ ರಾಜೇಶ್ ಡಿ ಮತ್ತು ಸೌಮ್ಯ ರವರ ಪುತ್ರಿಯಾಗಿರುತ್ತಾರೆ.
ಕುಮಾರಿ ಖಾತೀಜತ್ ರಹಿಲ ಇವರಿಗೆ 605 ಅಂಕಗಳಿದ್ದು ಮರು ಮೌಲ್ಯಮಾಪನದಲ್ಲಿ ಕನ್ನಡ ವಿಷಯದಲ್ಲಿ 4 ಅಂಕ ಹೆಚ್ಚುವರಿ ಪಡೆದು ಒಟ್ಟು 609 ಅಂಕ ಪಡೆದಿರುತ್ತಾರೆ. ಇವರು ದೇಲಂತಬೆಟ್ಟು ಅಬ್ದುಲ್ ರೆಹಿಮಾನ್ ಡಿ ಬಿ ಮತ್ತು ಜಮೀಲ ರವರ ಪುತ್ರಿಯಾಗಿರುತ್ತಾರೆ.
ಕುಮಾರಿ ಮೇಘಶ್ರೀ ಇವರು ಮೊದಲ ಮೌಲ್ಯಮಾಪನದಲ್ಲಿ 598 ಅಂಕ ಪಡೆದಿದ್ದು ಮರು ಮೌಲ್ಯಮಾಪನದಲ್ಲಿ ವಿಜ್ಞಾನ ವಿಷಯದಲ್ಲಿ 2 ಅಂಕದ ಸೇರ್ಪಡೆಯೊಂದಿಗೆ ಒಟ್ಟು 600 ಅಂಕ ಪಡೆದಿರುತ್ತಾರೆ. ಇವರು ಅಡ್ಕಸ್ಥಳ ರಘು ಮತ್ತು ಬಿಂದು ರವರ ಪುತ್ರಿಯಾಗಿರುತ್ತಾರೆ.
ಇವರ ಸಾಧನೆಯನ್ನು ಪ್ರಶಂಶಿಸಿ ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಆಡಳಿತ ಮಂಡಳಿ, ಆಡಳಿತಾಧಿಕಾರಿ, ಪ್ರಾಂಶುಪಾಲರು,ಉಪ ಪ್ರಾಂಶುಪಾಲೆಯರು ಮತ್ತು ಎಲ್ಲಾ ಶಿಕ್ಷಕ -ಶಿಕ್ಷಕೇತರ ವೃಂದವು ಅಭಿನಂದನೆಯನ್ನು ಸಲ್ಲಿಸಿದೆ.


























