ಪುತ್ತೂರು:ಪ್ರಧಾನಿ ನರೇಂದ್ರ ಮೋದಿ ರವರ ಸರ್ಕಾರ 8 ವರ್ಷ ಯಶಸ್ವಿ ಆಡಳಿತ ಪೂರೈಸಿದ ಸಂಭ್ರಮಾಚರಣೆ ಹಿನ್ನಲೆಯಲ್ಲಿ ಸೇವೆ, ಸುಶಾಸನ, ಮತ್ತು ಬಡವರ ಕಲ್ಯಾಣ ಕಾರ್ಯಕ್ರಮದಡಿ ಜಿಲ್ಲಾ ಯುವ ಮೋರ್ಚಾ ನೇತೃತ್ವದಲ್ಲಿನ ಬೈಕ್ ಜಾಥಾ ನಡೆಯಲಿದ್ದು ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದಿಂದ ಬೈಕ್ ಜಾಥಾ ಆಗಮಿಸಿ ಬಿ ಸಿ ರೋಡ್ ಸ್ಪರ್ಶ ಕಲಾ ಮಂದಿರದಲ್ಲಿ ಸಭಾಕಾರ್ಯಕ್ರಮ ಹಾಗೂ ಯುವ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜೂ 12 ರಂದು ನಡೆಯಲಿದೆ.
ಈ ಹಿನ್ನೆಲೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ವತಿಯಿಂದ ಬೈಕ್ ಜಾಥಾದಲ್ಲಿ ಭಾಗವಹಿಸುವ ಬಗ್ಗೆ ಪೂರ್ವಭಾವಿ ಸಭೆ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಗ್ರಾಮಾಂತರ ಮಂಡಲ ಯುವ ಮೋರ್ಚಾ ಅಧ್ಯಕ್ಷ ನವೀನ್ ಪಡ್ನೂರು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆ ಯಲ್ಲಿ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಗುರುದತ್ ಜಿ ನಾಯಕ್,ಬಿಜೆಪಿ ಗ್ರಾಮಾಂತರ ಮಂಡಲದ ಪ್ರದಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ,ಯುವ ಮೋರ್ಚಾದ ಗ್ರಾಮಾಂತರ ಮಂಡಲದ ಜಿಲ್ಲಾ ಪ್ರಭಾರಿ ಯತೀಶ್ ಶೆಟ್ಟಿ ಕಾರ್ಯಕ್ರಮದ ಯಶಸ್ವಿ ಕುರಿತು ಸಲಹೆ ಸೂಚನೆಗಳನ್ನು ನೀಡಿದರು.
ಅಧ್ಯಕ್ಷ ನವೀನ್ ಪಡ್ನೂರು ಮಾತನಾಡಿ ಪ್ರತಿ ಮಹಾ ಶಕ್ತಿ ಕೇಂದ್ರದಿಂದ 100 ಬೈಕ್ ಗಳಂತೆ ಒಟ್ಟು 6 ಮಹಾಶಕ್ತಿ ಕೇಂದ್ರಗಳಿಂದ ಸುಮಾರು 500 ಕ್ಕೂ ಮಿಕ್ಕಿ ಬೈಕ್ ಭಾಗವಹಿಸುವ ರೀತಿ ಯೋಜನೆ ಹಾಕಿಕೊಂಡಿದ್ದು, ಜೂ 12 ರಂದು ಬೆಳಿಗ್ಗೆ 9.00ಕ್ಕೆ ನೆಹರು ನಗರದ ಭಾರತ್ ಮಾತಾ ಸಭಾಭವನದ ಭಾರತ್ ಮಾತಾ ಮಂದಿರದ ಬಳಿ ಪುತ್ತೂರು ಶಾಸಕ ಸಂಜೀವ ಮಠ0ದೂರು ಚಾಲನೆ ನೀಡಲಿದ್ದಾರೆ ಎಂದರು.
ಸಭೆಯಲ್ಲಿ ಬಿಜೆಪಿ ಗ್ರಾಮಾಂತರ ಮಂಡಲದ ಯುವ ಮೋರ್ಚಾ ಪ್ರಭಾರಿ ಯತಿಂದ್ರ ಕೊಚ್ಚಿ,ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗಳಾದ ರತನ್ ರೈ, ಶ್ರೀಕಾಂತ್ ಕಾವು,ಪದಾಧಿಕಾರಿಗಳಾದ ಶೋಭಿತ್ ಕೆಮ್ಮಾರ ಚಂದ್ರಹಾಸ ಈಶ್ವರಮಂಗಳ,ವಿನೋದ್ ಕಾರ್ಪಮೂಲೆ, ಶಿಶಿರ್ ಪೇರ್ವೋಡಿ,ಹರೀಶ್ ಮಿತ್ತೋಡಿ, ಸುಜಿತ್ ಪರ್ಪುಂಜ,ಆದೇಶ ಶೆಟ್ಟಿಉಪ್ಪಿನಂಗಡಿ, ಕಾರ್ತಿಕ್ ರೈ, ಸಚಿನ್ ಪಟ್ಟೆ, ಮಂಜುನಾಥ ಗೌಡ ದುಗ್ಗಳ,ಕಾರ್ತಿಕ್ ಶೆಟ್ಟಿ ವಿಟ್ಲ, ಉಪಸ್ಥಿತರಿದ್ದರು.




























