ಮಂಗಳೂರು: ಹೊರವಲಯದ ಮುಲ್ಕಿ ಬಳಿ ಪೊಲೀಸರಿಂದ ಫೈರಿಂಗ್ ನಡೆದಿದ್ದು, ರೌಡಿಶೀಟರ್ ರಾಜಾ ಕೊಲೆ ಪ್ರಕರಣದ ಆರೋಪಿಗಳ ಮೇಲೆ ಪೊಲೀಸರ ಗುಂಡೇಟು ತಾಗಿದೆ.

ಆರೋಪಿಗಳ ಬಂಧನಕ್ಕೆ ತೆರಳಿದ್ದ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದರಿಂದ ಸಿಸಿಬಿ ಪೊಲೀಸರಿಂದ ಆರೋಪಿಗಳ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಇಬ್ಬರು ಆರೋಪಿಗಳ ಕಾಲಿಗೆ ಪೊಲೀಸರು ಗುಂಡು ಹೊಡೆದಿದ್ದಾರೆ.

ಕೊಲೆ ಆರೋಪಿಗಳಾದ ಅರ್ಜುನ್ ಮೂಡುಶೆಡ್ಡೆ, ಮನೋಜ್ ಅಲಿಯಾಸ್ ಬಿಂದಾಸ್ ಮನೋಜ್ ಗೆ ಪೊಲೀಸರ ಗುಂಡೇಟು ತಾಗಿದೆ. ಮೂರು ಸುತ್ತು ಗಾಳಿಯಲ್ಲಿ ಗುಂಡು ಹೊಡೆದ ಬಳಿಕ ಎರಡು ಸುತ್ತು ಆರೋಪಿಗಳ ಮೇಲೆ ಫೈರಿಂಗ್ ಮಾಡಲಾಗಿದೆ. ಸಿಸಿಬಿ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ರಿಂದ ಫೈರಿಂಗ್ ನಡೆದಿದೆ.

ಆರೋಪಿಗಳು ಪೊಲೀಸರ ಮೇಲೆ ದಾಳಿ ಮಾಡಿರುವುದರಿಂದ ಘಟನೆಯಲ್ಲಿ ಮೂವರು ಸಿಸಿಬಿ ಪೊಲೀಸರಿಗೆ ಗಾಯವಾಗಿದೆ. ಸಿಸಿಬಿ ಪಿಎಸ್ ಐ ನಾಗೇಂದ್ರ,ಎ ಎಚ್ ಸಿ ಸಂತೋಷ್, ಎಎಸ್ ಐ ಡೇವಿಡ್ ಎಂಬುವವರಿಗೆ ಗಾಯವಾಗಿದೆ.

























