ಬಂಟ್ವಾಳ: ಬಿಜೆಪಿ ಯುವಮೋರ್ಚಾ ವತಿಯಿಂದ ಬಿ.ಸಿ. ರೋಡ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುತ್ತೂರು ನಗರ ಮಂಡಲ ಹಾಗೂ ಗ್ರಾಮಾಂತರ ಮಂಡಲದ ಹಲವು ಸಾಧಕರನ್ನು ಸನ್ಮಾನಿಸಲಾಯಿತು.
ಪುತ್ತೂರು ನಗರ ಮಂಡಲ ವ್ಯಾಪ್ತಿಯ ಕನಸು ಕಣ್ಣು ತೆರೆದಾಗ ಸಿನಿಮಾದ ಮಹಾಲಸಾ ಪೈ, ಸಾಮಾಜಿಕ ಸೇವಾ ಕಾರ್ಯ ಮಾಡುತ್ತಿರುವ ವಿನಾಯಕ ಫ್ರೆಂಡ್ಸ್ ಬಲ್ನಾಡ್, ಉರಗ ಹಾಗೂ ವನ್ಯ ಜೀವಿ ರಕ್ಷಕ ತೇಜಸ್ ಗಾಣಿಗ, ಉತ್ತಮ ಛಾಯಾಗ್ರಾಹಕ ಪ್ರಶಸ್ತಿ ವಿಜೇತ ಜಗದೀಶ್ ಜೆ., ರಾಜ್ಯೋತ್ಸವ ಸಾಧಕ ಪ್ರಶಸ್ತಿ ವಿಜೇತ ಮುರಳಿ ಬ್ರದರ್ಸ್ ಡಾನ್ಸ್ ಅಕಾಡೆಮಿ, ರಾಷ್ಟ್ರ ಮಟ್ಟದ ಸರ್ಫರ್ ಸಿಂಚನ ಡಿ. ಗೌಡ., ರಾಷ್ಟ್ರ ಮಟ್ಟದ ತ್ರೋ ಬಾಲ್ ಆಟಗಾರ, ಬೆಳ್ಳಿ ಪದಕ ವಿಜೇತ ಚರಣ್., ತಬಲ ತಯಾರಕರಾದ ಮಾರುತಿ ರವರನ್ನು ವಿಶೇಷವಾಗಿ ಅಭಿನಂದಿಸಲಾಯಿತು.

ಪುತ್ತೂರು ಗ್ರಾಮಾಂತರ ಮಂಡಲ ವ್ಯಾಪ್ತಿಯ ಜೇನು ಕೃಷಿ ಸಾಧಕರಾದ ಅನೂಪ್ ಎ. ಜೆ. ಬೇರಿಕೆ., ಯುವ ಕೃಷಿಕ ರೋಶನ್ ಪೆರುವೋಡಿ, ಸಿನೆಮಾ ರಂಗದ ಕಾರ್ತಿಕ್ ರೈ ವಿಟ್ಲ, ರಕ್ತನಿಧಿ ತಂಡದ ಅಶೋಕ್ ತ್ಯಾಗರಾಜನಗರ, ರಾಷ್ಟ್ರೀಯ ವಾಲಿಬಾಲ್ ಆಟಗಾರ ದೀಕ್ಷಿತ್ ಎಸ್. ಶೆಟ್ಟಿ, ಅಬೀರಿ, ಇಂಜಿನಿಯರಿಂಗ್ ವರ್ಕ್ಸ್ ನ ಹರೀಶ್ ಕೆ. ಎಸ್., ಕೋಡಿಂಬಾಡಿ., ಯೋಗ ಪಟುಗಳಾದ ಶ್ರವಣ್ ಕುಮಾರ್ ದೇಂತಡ್ಕ., ಯುವ ಹೈನುಗಾರರಾದ ಸಂದೇಶ್, ಅಂತರಾಷ್ಟ್ರೀಯ ಚೆಸ್ ಆಟಗಾರ್ತಿ ಯಶಸ್ವಿ ಕೆದಿಲ, ಯುವ ವೈದ್ಯ ಹಾಗೂ ಯಕ್ಷಗಾನ ಭಾಗವತರಾದ ಡಾ. ಪ್ರಖ್ಯಾತ್ ಶೆಟ್ಟಿ ಅಳಿಕೆ, ಅಂತರಾಷ್ಟ್ರೀಯ ಯುವ ವಿಜ್ಞಾನಿ ಪ್ರಶಸ್ತಿ ಪುರಸ್ಕೃತ ಸ್ವಸ್ತಿಕ್ ಪದ್ಮ ಕೆದಿಲ ರವರನ್ನು ಕಾರ್ಯಕ್ರಮದಲ್ಲಿ ವಿಶೇಷವಾಗಿ ಸನ್ಮಾನಿಸಲಾಯಿತು.

























