ಢಾಕಾ: ಕೊರೊನಾ ಸಂಕಷ್ಟ ಅವಧಿ ಆರಂಭವಾದ ಬಳಿಕ ಪ್ರಧಾನಿ ಮೋದಿ ಅವರು ಇದೇ ಮೊದಲ ಬಾರಿಗೆ ವಿದೇಶಿ ಪ್ರವಾಸ ಕೈಗೊಂಡಿದ್ದು, 2ನೇ ದಿನ ಪ್ರವಾಸದಲ್ಲಿ ಮೋದಿ 51 ಶಕ್ತಿಪೀಠಗಳಲ್ಲಿ ಒಂದಾದ ಬಾಂಗ್ಲಾದೇಶದ ಪ್ರಾಚೀನ ಜಶೋರೇಶ್ವರಿ ಕಾಳಿ ದೇವಾಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ..
ಪುರಾಣ ಸಂಪ್ರದಾಯ ತಿಳಿಸುವ 51 ಶಕ್ತಿಪೀಠಗಳಲ್ಲಿ ಸತ್ಯಾನಗರ್ ಬಳಿಯ ಈಶ್ವರ್ಪುರ್ ಗ್ರಾಮದಲ್ಲಿರುವ ಜಶೋರೇಶ್ವರಿ ಕಾಳಿ ದೇವಸ್ಥಾನವೂ ಒಂದಾಗಿದ್ದು, ಪಶ್ಚಿಮ ಬೆಂಗಾಲ್ ಗಡಿಯ ಸಮೀಪ ದೇವಸ್ಥಾನವಿದೆ. ದೇವಸ್ಥಾನದ ಭೇಟಿ ಬಳಿಕ ಒರಾಕಂಡಿಯಲ್ಲಿರುವ ಹಿಂದೂ ಮಥುರಾ ಸಮುದಾಯದ ಜನರೊಂದಿಗೆ ಮೋದಿ ಸಂವಾದ ನಡೆಯಲಿದೆ. ಜಶೋರೇಶ್ವರಿ ದೇವಸ್ಥಾನವಲ್ಲದೇ ಒರ್ಕಾಂಡಿ ದೇವಾಲಯಕ್ಕೂ ಮೋದಿ ಭೇಟಿ ನೀಡಿ ಮೋದಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಪ್ರಧಾನಿ ಮೋದಿ ಅವರ ಭೇಟಿಯ ಹಿನ್ನೆಲೆಯ ವಿಶೇಷವಾಗಿ ಬಾಂಗ್ಲಾ ಸರ್ಕಾರ ಪ್ರಮುಖ ಎರಡು ದೇವಾಲಯಗಳನ್ನು ಜೀಣೋದ್ಧಾರ ಮಾಡಿ ಪ್ರಧಾನಿಗೆ ಸ್ವಾಗತ ಕೋರಿದೆ. ಅವರು ಭಾರತ ಮತ್ತು ಬಾಂಗ್ಲಾದೇಶದ ಲಕ್ಷಾಂತರ ಜನರಿಗಾಗಿ ಪ್ರಾರ್ಥಿಸಬೇಕೆಂದು ನಾವು ನಿರೀಕ್ಷೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಇತಿಹಾಸದ ಕುರುಹುಗಳು ಹೇಳುವಂತೆ ಈ ದೇವಸ್ಥಾನವನ್ನು 16ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಗಿದೆ.