ಪುತ್ತೂರು: ಶಿವಳ್ಳಿ ಸಂಪದದ 27ನೇ ವಾರ್ಷಿಕ ಮಹಾಸಭೆ, ರಜತ ಸಂಪದ ಬಿಡುಗಡೆ, ಶಿವಳ್ಳಿ ವಿಭೂಷಣ ಪ್ರಶಸ್ತಿ, ಶಿವಳ್ಳಿ ಪ್ರಶಸ್ತಿ, ಕೃಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳು ಜೂ.12 ರಂದು ಕೆಮ್ಮಾಯಿ ಶ್ರೀವಿಷ್ಣು ಮಂಟಪದಲ್ಲಿ ನಡೆಯಿತು.
ಶಿವಳ್ಳಿ ಸಂಪದದ ಪರಿಸ್ಕೃತ ಮಾಹಿತಿ ಕೋಶ `ರಜತ ಸಂಪದ’ವನ್ನು ಶ್ರೀ ಸಚ್ಚಿದಾನಂದ ಸ್ವಾಮಿಜಿಯವರು ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ ವೆಬ್ ಪೀಪಲ್ ಸಂಸ್ಥೆಯ ಆದಿತ್ಯ ಕಲ್ಲೂರಾಯ ರವರಿಗೆ ಶಿವಳ್ಳಿ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಶ್ರೀ ಸಚ್ಚಿದಾನಂದ ಸ್ವಾಮಿಜಿಯವರು ಪ್ರಶಸ್ತಿ ನೀಡಿ ಗೌರವಿಸಿದರು..

























