ಉತ್ತರ ಪ್ರದೇಶ: ಉತ್ತರ ಪ್ರದೇಶದ ಮೈನ್ಪುರಿ ಮತ್ತು ಫರೂಕಾಬಾದ್ ಜಿಲ್ಲೆಗಳ ಗಡಿ ಭಾಗದ ಗ್ರಾಮೀಣ ಪ್ರದೇಶದಲ್ಲಿ ಮುಸ್ಲಿಂ ಯುವಕನೊಬ್ಬ ತನ್ನ ಎದೆಯ ಮೇಲೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹಚ್ಚೆಯನ್ನು ಹಾಕಿಸಿಕೊಂಡು ಅಭಿಮಾನ ಮೆರೆದಿರುವ ಘಟನೆ ನಡೆದಿದೆ.
ಯಮೀನ್ ಸಿದ್ಧಿಕಿ ಎಂಬ ಯುವಕ ಯೋಗಿ ಆದಿತ್ಯನಾಥ್ ಜನ್ಮ ದಿನದ ಪ್ರಯುಕ್ತ ಹಚ್ಚೆ ಹಾಕಿಸಿಕೊಂಡಿದ್ದು, ಯೋಗಿ ನನ್ನ ಮಾದರಿ ವ್ಯಕ್ತಿ ಎಂದು ಹೇಳಿದ್ದಾನೆ.

ಇನ್ನು ಆತ ಮಾಡಿರುವ ಈ ಕೆಲಸಕ್ಕೆ ಸಂಬಂಧಿಕರು – ಸ್ನೇಹಿತರು ಟೀಕಿಸುತ್ತಿದ್ದರೂ ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ ಎನ್ನಲಾಗಿದೆ.


























