ಉಡುಪಿ: ಕಪಾಟಿನಲ್ಲಿದ್ದ ಅಂಗಿ ತೆಗೆಯಲು ಕೈ ಹಾಕಿದಾಗ ನಾಗರ ಹಾವು ಕಚ್ಚಿ ವ್ಯಕ್ತಿಯೋರ್ವ ಸಾವನ್ನಪ್ಪಿದ ದುರಂತ ಘಟನೆ ಉಡುಪಿ ಜಿಲ್ಲೆಯ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸುಧಾಕರ ಅಮೀನ್ (55) ಮೃತ ದುರ್ದೈವಿ.

ಕಿದಿಯೂರು ಗ್ರಾಮದ ಸುಧಾಕರ ಅಮೀನ್ ಅವರು ತನ್ನ ಮನೆಯ ಕೋಣೆಯಲ್ಲಿ ಕಪಾಟಿನ ಮೇಲೆ ಇದ್ದ ಅಂಗಿಯನ್ನು ತೆಗೆಯಲು ಹೋದಾಗ ಕಪಾಟಿನ ಮೇಲೆ ಇದ್ದ ನಾಗರಹಾವು ಕಚ್ಚಿದೆ.
ಕೂಡಲೇ ಸುಧಾಕರ ಅಮೀನ್ ರವರನ್ನು ಉಡುಪಿ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಜೂ.13ರಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.

























