ಪುತ್ತೂರು: ಆಲ್ ಇಂಡಿಯಾ ಮೊಬೈಲ್ ರಿಟೇಲರ್ಸ್ ಏಸೋಶಿಯೇಶನ್ ಇದರ ಪುತ್ತೂರು ಘಟಕ ಮತ್ತು ಜೆಸಿಐ ಪುತ್ತೂರು ಘಟಕದ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರವು ಜೂ.17 ರಂದು ಪುತ್ತೂರಿನ ರೋಟರಿ ಕ್ಲಬ್ ಬ್ಯಾಂಕ್ ನ ಸಭಾಂಗಣದಲ್ಲಿ ನಡೆಯಲಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಡಾ. ಶಶಿಧರ್ ಕಜೆ ಮತ್ತು ಜೆಸಿಐ ಪುತ್ತೂರು ಘಟಕದ ಅಧ್ಯಕ್ಷರಾದ ಜೆಸಿ ಶಶಿರಾಜ್ ರೈ ರವರು ನೆರವೇರಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಪುತ್ತೂರು ಸುಳ್ಯ ಕಡಬ ತಾಲೂಕಿನ ಮೊಬೈಲ್ ರಿಟೇಲರ್ ಅಸೋಸಿಯೇಷನ್ ಇದರ ಗೌರವಧ್ಯಕ್ಷರಾದ ಸಿರಾಜುದ್ದೀನ್ ಮೊಬೈಲ್ ಕೇರ್, ಪುತ್ತೂರು ಘಟಕದ ಅಧ್ಯಕ್ಷರಾದ ಪ್ರವೀಣ್ ಅಮೈ ಸೆಲ್ ಝೋನ್, ಕಾರ್ಯದರ್ಶಿ ಪ್ರಕಾಶ್ ಇಫಾ ಮೊಬೈಲ್, ಉಪಾಧ್ಯಕ್ಷರಾದ ಜಮಾಲ್, ಕೋಶಾಧಿಕಾರಿಯಾದ ರಿಯಾಜ್ ಆಗಮಿಸಲಿದ್ದಾರೆ.

ಈ ಹಿನ್ನೆಲೆ ಜೂ.16 ರಂದು ಎಲ್ಲಾ ಮೊಬೈಲ್ ಶಾಫ್ ಗಳಿಗೆ ಭೇಟಿ ನೀಡಿ ರಕ್ತದಾನ ಶಿಬಿರದ ಅಭಿಯಾನ ಮಾಡಲಾಯಿತು.




























