ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಬಹುನಿರೀಕ್ಷಿತ ಸಿನಿಮಾ ‘777 ಚಾರ್ಲಿ’ ರಿಲೀಸ್ ಆಗಿ ಒಂದು ವಾರ ಆಗಿದೆ. ಈಗಾಗಲೇ ಬಾಕ್ಸಾಫೀಸ್ನಲ್ಲಿ ಧೂಳೆಬ್ಬಿಸಿರೋ ಚಾರ್ಲಿ ಜನರಿಂದಲೂ ಭಾರೀ ಮೆಚ್ಚುಗೆ ಪಡೆದುಕೊಂಡಿದೆ. ಈ ನಡುವೆ ಚಾರ್ಲಿ ಸಿನಿಮಾ ನೋಡೋ ಪ್ರೇಕ್ಷಕರಿಗೆ ಸರ್ಕಾರದಿಂದ ಗುಡ್ನ್ಯೂಸ್ ಸಿಕ್ಕಿದೆ.
ಚಾರ್ಲಿ ಚಿತ್ರಕ್ಕೆ ಮುಂದಿನ 6 ತಿಂಗಳ ಕಾಲ ಜಿಎಸ್ಟಿ ವಿನಾಯಿತಿ ಕೊಟ್ಟಿದೆ ಸರ್ಕಾರ. ಚಿತ್ರದ ಮೇಲಿನ ಜಿಎಸ್ಟಿ ಇಲ್ಲದೇ ಚಾರ್ಲಿ ವೀಕ್ಷಣೆಗೆ ಅವಕಾಶ ನೀಡಿದೆ.
ಸಾಮಾಜಿಕ ಕಳಕಳಿ ದೃಷ್ಟಿಯಿಂದ ಸಿಎಂ ಕೊಟ್ಟ ಸೂಚನೆ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ರಾಜ್ಯದ ಎಲ್ಲಾ ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್ಗಳಲ್ಲಿ ವಿನಾಯಿತಿ ನೀಡಿ ಸರ್ಕಾರ ಆದೇಶ ಹೊರಡಿಸಿದೆ.

























