ತೆಂಗಿನ ಮತ್ತು ಅಡಿಕೆ ಮರಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಅತೀ ಹೆಚ್ಚು ಕಂಡು ಬರುವ ರೋಗಗಳಲ್ಲಿ ಪ್ರಮುಖ ರೋಗ ಕಾಂಡ ಕೊರೆಯುವ ರೋಗವಾಗಿದೆ. ಈ ಕಾಂಡ ಕೊರೆಯುವ ರೋಗಗಳನ್ನು ಉತ್ಪತ್ತಿ ಮಾಡುವ ಕೀಟಗಳನ್ನು ಸಂಪೂರ್ಣವಾಗಿ ಹತೋಟಿಗೆ ತರಲು ಭಾರತ ಸರಕಾರದ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ ಕಾಸರಗೋಡು ಇದರ ವಿಜ್ಞಾನಿಗಳು ಸುಮಾರು 10 ರಿಂದ 12 ವರ್ಷಗಳ ಕಾಲ ನಡೆಸಿದ ಸಂಶೋಧನೆಯಲ್ಲಿ EPN (ಕೀಟ ಭಕ್ಷಕ ಜಂತು ಹುಳು) ಎಂಬ ದ್ರವ ರೂಪದ ಔಷದವನ್ನು ಕಂಡುಹಿಡಿದಿದ್ದಾರೆ. ಈ ಔಷಧವನ್ನು ರೈತರಿಗೆ ಅಲ್ಪ ಮೊತ್ತದಲ್ಲಿ ಮಾರಾಟ ಮತ್ತು ವಿತರಣೆ ಮಾಡುವ ಸಂಪೂರ್ಣ ಪರವಾನಿಗೆಯನ್ನು ದಕ್ಷಿಣ ಕನ್ನಡ ಜಿಲ್ಲಾ ತೆಂಗು ರೈತ ಉತ್ಪಾದಕರ ಸಂಸ್ಥೆಯು ಪಡೆದುಕೊಂಡಿದೆ.
ಸಂಪೂರ್ಣ ರಾಸಾಯನಿಕ ಮುಕ್ತ ಭಾರತ ಎಂಬ ಕ್ರಿಯಾಯೋಜನೆಯಲ್ಲಿ ತಯಾರಿಸಲ್ಪಟ್ಟ ಜೈವಿಕ ದ್ರವರೂಪದಲ್ಲಿರುವ ಕೀಟನಾಶಕವಾಗಿದೆ.

ಮರಗಳ ಬೇರುಗಳನ್ನು ತಿನ್ನುವ ಕೀಟಗಳು ಸಂಪೂರ್ಣವಾಗಿ ನಾಶ ಮಾಡುವ ತೆಂಗಿನ ಮತ್ತು ಅಡಿಕೆ ಮರಗಳ ಬೇರುಗಳನ್ನು ತಿನ್ನುವ ರೋಗ ಭಾದೆಯನ್ನು ಸಂಪೂರ್ಣವಾಗಿ ಹತೋಟಿಗೆ ತರುವ ಜಂತುಹುಳು (ಈ.ಪಿ.ಎನ್) ಜೈವಿಕ ಸಿಂಪಡನೆ ಮಾಡಿದರೆ ಈ ರೋಗ ಲಕ್ಷಣಗಳು ಹತೋಟಿಗೆ ಬರುತ್ತದೆ.
ಮಳೆಗಾಲ ಪ್ರಾರಂಭವಾಗುವ ಸಮಯದಲ್ಲಿ ತೆಂಗು ಮತ್ತುಅಡಿಕೆ ಮರದಲ್ಲಿ ಸಾಮಾನ್ಯವಾಗಿ ಮೂರು ವಿವಿಧ ಬೇರು ಹುಳಗಳು ಕಂಡು ಬರುತ್ತದೆ. ತೆಂಗಿನ ಮತ್ತುಅಡಿಕೆ ಮರಗಳ ಬೆಳೆಯು ಬಹುವಾರ್ಷಿಕ ಬೆಳೆಯಾದುದರಿಂದ ಮರಗಳ ಬುಡದಲ್ಲಿ ಉತ್ತಮವಾದ ನೆರಳು ಮತ್ತು ನಿರಂತರವಾದ ಮಣ್ಣಿನ ತೇವಾಂಶ ಇರುವುದರಿಂದ ಬೇರು ಮತ್ತು ಮರಗಳನ್ನು ಹಾಳು ಮಾಡುವ ಸಮಗ್ರ ಕೀಟಗಳು ಉತ್ಪತ್ತಿಗೊಳ್ಳುತ್ತವೆ. ಇದರಿಂದ ಮರ ಮತ್ತು ಗಿಡಗಳು ಬೆಳವಣಿಗೆ ಹಾಗೂ ಫಸಲಲ್ಲಿ ಕುಂಟಿತವಾಗುತ್ತದೆ.

ಇಂತಹ ರೋಗ ಹಾಗೂ ಕೀಟ ಭಾದೆಗಳಿಂದ ಮರಗಳನ್ನು ರಕ್ಷಿಸಲು ಜೈವಿಕ ನಿಯಂತ್ರಣವು ಈ.ಪಿ.ಎನ್ ಒಂದು ಪ್ರಮುಖ ತಂತ್ರವಾಗಿದೆ. ಈ ಜೈವಿಕ ಜಂತು ಹುಳಗಳು ತ್ವರಿತವಾಗಿ ಕೀಟಗಳನ್ನು ನಾಶ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

ತೆಂಗಿನ ಮತ್ತು ಅಡಿಕೆ ಮರಗಳಿಗೆ ಬೇರು ಹುಳುಗಳ ಹಾನಿಯಿಂದ ಉಂಟಾಗುವ ಲಕ್ಷಣಗಳು :-
ಬೇರು ಹುಳುಗಳು ನಿರಂತರವಾಗಿ ಬೇರುಗಳನ್ನು ತಿನ್ನುವುದರಿಂದ ಮರಗಳಿಗೆ ನೀರು ಮತ್ತು ಆಹಾರದ ಕೊರತೆಯುಂಟಾಗುತ್ತದೆ. ಇದರಿಂದ ಎಲೆಗಳು ತಿಳಿ ಹಳದಿಯಾಗುತ್ತವೆ ಮತ್ತು ಇಳುವರಿ ಕಡಿಮೆಯಾಗುತ್ತದೆ. ಚೆಂಡೆಯ ಗಾತ್ರ ಕಿರಿದಾಗುತ್ತದೆ ಮತ್ತು ಮರಗಳು ಕಿರಿದಾಗುತ್ತಾ, ಸಣ್ಣಗಾಗುತ್ತಾ ಹೋಗುತ್ತವೆ. ಬೇರು ಹುಳುಗಳ ತೀವ್ರತೆ ಹೆಚ್ಚಿರುವ ತೋಟಗಳಲ್ಲಿ ಒಂದು ಮರದ ಬುಡದಲ್ಲಿ 30-40 ಬೇರು ಹುಳುಗಳನ್ನು ಕಾಣಬಹುದು ಮತ್ತು ಬಹಳಷ್ಟು ಬೇರುಗಳನ್ನು ಹುಳುಗಳು ತಿನ್ನುವುದರಿಂದ ಆ ಮರಗಳನ್ನು ಸುಲಭವಾಗಿ ಬೇರು ಸಮೇತ ಧರೆಗುರುಳುತ್ತದೆ . ಬೇರುಗಳನ್ನು ತಿಂದ ನಂತರ ಹುಳುಗಳು ಮರದ ಬುಡಭಾಗಕ್ಕೆ ಹೋಗಿ ಅಲ್ಲಿಯೂ ಸಹ ತೀವ್ರಹಾನಿಯನ್ನು ಉಂಟುಮಾಡುತ್ತವೆ. ಸಂಶಯವಿರುವ ತೋಟಗಳಲ್ಲಿ ಮರಗಳ ಬುಡಗಳ ಹತ್ತಿರ ಸುಮಾರು 30 ಸೆ.ಮೀ. ಆಳದವರೆಗೆ ಅಗೆದರೆ ಬೇರು ಹುಳುಗಳಿರುವುದನ್ನು ನಾವು ಕಾಣಬಹುದು.

ತೆಂಗು ಮತ್ತು ಅಡಿಕೆ ಮರಗಳ ಕಾಂಡಗಳ ಮೇಲೆ ಹುಳುಗಳ ನಡವಳಿಕೆ:
ಮಣ್ಣಿನ ತೇವಾಂಶ ಮತ್ತು ತಾಪಮಾನವನ್ನು ಆಧರಿಸಿ ಮೂರು ಲ್ಯೂಕೊಫೋಲಿಸ್ ಜಾತಿಯ ಬೇರು ಹುಳುಗಳ ಪ್ರೌಢ ಹುಳುಗಳು ಹೊರಹೊಮ್ಮುವ ಮಾದರಿ ಮತ್ತು ಸಮಯ ಬೇರೆ ಬೇರೆಯಾಗಿದೆ. ಮೊದಲನೇ ಹಂತದ ಮರಿ ಹುಳುಗಳು ತೆಂಗು ಮತ್ತು ಅಡಿಕೆ ಮರಗಳ ಪರ್ಯಾಯ ಆಶ್ರಯ ಬೆಳೆಗಳ ಬೇರುಗಳನ್ನು ತಿನ್ನುತ್ತವೆ.ಅನಂತರ ತಮ್ಮ ನೆಲೆಯನ್ನು ದೊಡ್ಡ ಬೇರುಗಳಿಗೆ ಬದಲಾಯಿಸಿಕೊಂಡು ಈ ಬೇರುಗಳನ್ನು ಸಹ ತಿನ್ನುತ್ತವೆ.ಮೂರು ಜಾತಿಯ ಬೇರು ಹುಳುಗಳಲ್ಲಿ ಲ್ಯೂಕೊಪೋಲಿಸ್ ಕೋನಿಯೊಪೋರ ಹುಳುವು ಒಂದು ವರ್ಷದಲ್ಲಿ ತನ್ನ ಜೀವನ ಚಕ್ರವನ್ನು ಮುಗಿಸಿದರೆ, ಲ್ಯೂಕೊಪೋಲಿಸ್ ಬರ್ಮಿಸ್ಟೆರಿ ಮತ್ತು ಲ್ಯೂಕೊಪೋಲಿಸ್ ಲೆಪಿಡೋಪೋರ ಹುಳುಗಳು ಎರಡು ವರ್ಷಗಳಲ್ಲಿ ತಮ್ಮ ಜೀವನ ಚಕ್ರವನ್ನು ಮುಗಿಸುತ್ತವೆ.
ತೆಂಗು ಮತ್ತು ಅಡಿಕೆ ಮರದಲ್ಲಿ ಕೆಂಪು ಮತ್ತು ಕಪ್ಪು ಸೋರಿಕೆಯ ರೋಗಗಳನ್ನು ತಡೆಗಟ್ಟಲು ನಮ್ಮಲ್ಲಿ ಉತ್ಪನ್ನಗಳು ಲಭ್ಯವಿರುತ್ತದೆ.
ಬೇರು ಹುಳುವಿನ ವಿರುದ್ಧವಾಗಿ ಜಂತು ಹುಳುವಿನ ಬಳಕೆ:-
- ಜೈವಿಕ ಜಂತು ಹುಳದ ದ್ರವ ರೂಪಕ್ಕೆ ಸೇರಿದ (ಕೀಟ ಭಕ್ಷಕ ಜಂತು ಹುಳು ಈ.ಪಿ.ಎನ್ 200ml)ಗೆ ಪ್ರತಿ 5 ರಿಂದ 15 ಲಿಟರ್ . ನೀರಿನಲ್ಲಿ ಬೆರೆಸಿ ಮಿಶ್ರನವನ್ನು ವರ್ಷದ ತಂಪಾದ ಸಮಯಗಳಲ್ಲಿ ಅಥವಾ ಮರಗಳಿಗೆ ನೀರು ಹಾಯಿಸುವ ತಿಂಗಳುಗಳಲ್ಲಿ ತೆಂಗು ಮತ್ತು ಅಡಿಕೆ ಮರದ ಬುಡಕ್ಕೆ ಸುರಿಯಬೇಕು.
- 1 ರಿಂದ 10 ವರ್ಷದವರೆಗಿನ ತೆಂಗಿನ ಸಸಿಗಳಿಗೆ (500ml) 10 ವರ್ಷದಿಂದ ಮೇಲಿನ ಪ್ರತಿ ತೆಂಗಿನ ಮರಗಳಿಗೆ 1 ಲೀಟರ್ 1 ರಿಂದ 5 ವರ್ಷದ ಪ್ರತಿ ಅಡಿಕೆ ಸಸಿಗಳಿಗೆ ಅರ್ದ ಲೀಟರ್ ಹಾಗೂ 5 ವರ್ಷದ ಮೇಲಿನ ಪ್ರತಿ ಅಡಿಕೆ ಮರಗಳಿಗೆ 700 ml ವರ್ಷಕ್ಕೆ ಮೂರು ಬಾರಿ ಕನಿಷ್ಠ ಮೂರು ವರ್ಷಗಳ ಕಾಲ ಸರಿಯಾಗಿ ದ್ರಾವಣವನ್ನು ಅಳುಗಾಡಿಸಿ ಮರಗಳ ಬುಡಕ್ಕೆ ಸುರಿಯಬೇಕು.
ಉಪಯೋಗ:
- ಅಡಿಕೆ ಮರಗಳಿಗೆ EPN ಹಾಕುವುದರಿಂದ ಹೊಸ ಬೇರುಗಳ ಬೆಳವಣಿಗೆಗೆ ಸಹಾಯವಾಗುತ್ತದೆ. ಉತ್ತಮ ಇಳುವರಿಗಳನ್ನು ಕೂಡುವ ಮೂಲಕ ಮರಗಳಿಗೆ ಭಾದಿಸುವ ವಿವಿಧ ರೀತಿಯ ಬೇರು ಹುಳಗಳನ್ನು ಹತೋಟಿಯಲ್ಲಿಡಲು ಪೂರಕ ವಾತಾವರಣವನ್ನು ಒದಗಿಸುತ್ತದೆ.
- ಮರಗಳು ಆರೋಗ್ಯವಾಗಿ ಬೆಳೆಯಲು ಕನಿಷ್ಠ ಮೂರು ವರ್ಷಗಳ ಕಾಲ (ಈ.ಪಿ.ಎನ್) ಜಂತು ಹುಳು ನಿರ್ವಹಣಾ ಕಾರ್ಯವನ್ನು ಬೇರು ಹುಳ ಮತ್ತು ಕೀಟಗಳ ಭಾದೆಯನ್ನು ತಪ್ಪಿಸಲು ತೆಂಗಿನ ಮತ್ತು ಅಡಿಕೆ ತೋಟ ಹೊಂದಿದ ಎಲ್ಲಾ ರೈತರು ಇದರ ಸದುಪಯೋಗ ಪಡೆಯಬಹುದು.
ಕಾಫಿ ಮತ್ತು ಟೀ ಗಿಡಗಳಲ್ಲಿ ಕಂಡು ಬರುವ ಕೀಟಗಳು :-
ಕಾಫಿ ಮತ್ತು ಟೀ ಭಾರತ ದೇಶದ ವಾಣಿಜ್ಯ ಬೆಳೆಯಾಗಿದೆ .ಕಾಫಿ ಮತ್ತು ಟೀ ಗಿಡಗಳಲ್ಲಿ ಚಿಗುರು ತಿನ್ನುವ ಹಾಗೂ ವಿವಿಧ ರೀತಿಯಲ್ಲಿ ಕಂಡು ಬರುವ ಕೀಟಗಳೆಂದರೆ ಹೇರಿ ಕ್ಯಾಟರ್‌ಪಿಲ್ಲರ್, ಬಿಳಿ ಹುಳ,ಕಾಫಿ ಹಣ್ಣು ಕೊರಕ ಹುಳು, ಹಾಗೂ ಟೀ ಯಲ್ಲಿ ಲೂಪರ್ ಕ್ಯಾಟರ್‌ಪಿಲ್ಲರ್,ರಾಬ್ಸರ‍್ಟ್ ಕ್ಯಾಟರ್‌ಪಿಲ್ಲರ್ ಇತ್ಯಾದಿ ಹುಳುಗಳು ಬೆಳೆಗಳಿಗೆ ಮಾರಕವಾಗಿದೆ. ಇದನ್ನು ಸಂಪೂರ್ಣವಾಗಿ ಈ.ಪಿ.ಎನ್ ಎಂಬ ಜಂತು ಹುಳು ನಿವಾರಕ ಸಿಂಪಡಿಸುವುದರಿಂದ ತಡೆಗಟ್ಟಬಹುದು.
ಕೀಟಗಳ ನಿರ್ಮೂಲನೆಯಲ್ಲಿ ಈಪಿಎನ್ ಬಳಕೆ :-
ಎಲೆ ತಿನ್ನುವ ಕೀಟಗಳು ಗಿಡಗಳಿಗೆ ಬಂದಿದೆ ಎಂದು ತಿಳಿದ ತಕ್ಷಣ ಈ.ಪಿ.ಎನ್ (ಕೀಟ ಭಕ್ಷಕ ಜಂತುಹುಳ)ವನ್ನು ಮುಂಜಾಗ್ರತಾ ಕ್ರಮವಾಗಿ ಬಳಸಬಹುದು. (ತರಕಾರಿ ಬೆಳೆಯುವ ರೈತರು ಇದರ ಸದುಪಯೋಗ ಪಡೆಯಬಹುದು)
- ಕೀಟಗಳ ಸಂಖ್ಯೆ ಜಾಸ್ತಿಯಿದ್ದಲ್ಲಿ ಕೂಡ ಈಪಿಎನ್ ಅನ್ನು ತಕ್ಷಣವೇ ಬಳಸಬಹುದು.
- ಈ.ಪಿ.ಎನ್ ಬಳಸುವ ಮುನ್ನ ಗಿಡಗಳಿಗೆ ನೀರು ಹಾಯಿಸುವುದು ಉತ್ತಮ.
- ಉತ್ತಮ ಫಲಿತಾಂಶಕ್ಕಾಗಿ ಈ.ಪಿ.ಎನ್ ಬಳಕೆಯು ಮುಂಜಾನೆ ಅಥವಾ ಸಾಯಂಕಾಲ ಪ್ರಶಸ್ತ ಸಮಯವಾಗಿದೆ.
- 200ml ಈ.ಪಿ.ಎನ್ ಪ್ಯಾಕೇಟ್ ಅನ್ನು 5ರಿಂದ 15 ಲೀಟರ್ ನೀರಿಗೆ ಹಾಕಿ ಸಿಂಪಡನೆ ಮಾಡಬಹುದು ಹಾಗೂ ಸಿಂಪಡಿಸುವಾಗ ಸ್ಪ್ರೇಯರ್ ನ್ನು ಕುಲುಕಿಸಬೇಕು.
ಹೆಚ್ಚಿನ ಮಾಹಿತಿಗಾಗಿ 9481847763, 7338567763 ಅನ್ನು ಸಂಪರ್ಕಿಸಬಹುದಾಗಿದೆ..


