ಪುತ್ತೂರು: ಕಲ್ಪತರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ತಿಪಟೂರು ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗವು ದಕ್ಷಿಣ ಭಾರತದ ಸುಮಾರು ಹದಿಮೂರು ಇಂಜಿನಿಯರಿಂಗ್ ವಿಭಾಗಗಳಲ್ಲಿ 3rd South India Project exhibition ಆಯೋಜಿಸಿದ್ದು, ವಿವಿಧ ತಾಂತ್ರಿಕ ವಲಯಗಳಿಂದ ಸುಮಾರು 75 ಪ್ರಾಜೆಕ್ಟ್ ಗಳು ಪಾಲ್ಗೊಂಡಿದ್ದವು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್ ಸಿವಿಲ್ ಇಂಜಿನಿಯರಿಂಗ್ ವಿಭಾಗದ, Plastic Waste roofing tiles ಎಂಬ ಪ್ರೊಜೆಕ್ಟ್ ತೃತೀಯ ಬಹುಮಾನವನ್ನು ಪಡೆಯಿತು.

ಬಹುಮಾನವು ರೂಪಾಯಿ 10 ಸಾವಿರ ರೂ ನಗದು ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ವಿದ್ಯಾರ್ಥಿಗಳಾದ ಹೃತಿಕ್ ಲಾಯ್ ಸ್ಟನ್, ಕೌಶಿಕ್ ಅಡಿಗ, ದುರ್ಗೇಶ್, ಮಹೇಶ್ ಬಾಬು ಇವರು ವಿನ್ಯಾಸ ಪಡಿಸಿದ್ದ ಪ್ರಾಜೆಕ್ಟ್ ಇದಾಗಿದ್ದು, ಸಿವಿಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥೆ ತೃಪ್ತಿ ರತನ್ ರೈ ಮತ್ತು ಸಿವಿಲ್ ವಿಭಾಗದ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ವಿನ್ಯಾಸ ಪಡಿಸಿದರು.

























