ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ವಿವಿಧ ಕಡೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನರು ಆತಂಕಗೊಂಡಿದ್ದಾರೆ.
ಸುಳ್ಯ ಪಟ್ಟಣ, ಸಂಪಾಜೆ, ಗೂನಡ್ಕ, ಮರ್ಕಂಜ, ಆಲೆಟ್ಟಿ, ತೊಡಿಕಾನ, ಪೆರಾಜೆ ಎಂಬಲ್ಲಿ ಇಂದು ಬೆಳಗ್ಗೆ 9.12 ರ ವೇಳೆಗೆ 3-4 ಸೆಕೆಂಡುಗಳ ಕಾಲ ಶಬ್ದದೊಂದಿಗೆ ಲಘು ಕಂಪನ ಆಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.

ಸುಳ್ಯದಲ್ಲಿ 3-4 ಸೆಕೆಂಡುಗಳ ಕಾಲ ಭಾರಿ ಶಬ್ದದೊಂದಿಗೆ ಲಘು ಕಂಪನವಾಗಿದ್ದು, ಮನೆ ಗೋಡೆ ಬಿರುಕು ಬಿಟ್ಟಿದೆ.