ಪುತ್ತೂರು: ಸ್ಕೂಟರ್ ಗಳೆರಡರ ನಡುವೆ ಅಪಘಾತ ನಡೆದ ಘಟನೆ ತುಮಕೂರಿನಲ್ಲಿ ಜೂ.25 ರ ತಡ ರಾತ್ರಿ ನಡೆದಿದ್ದು, ಅಪಘಾತದಲ್ಲಿ ಮೂವರು ಮೃತಪಟ್ಟಿದ್ದು. ಈ ಪೈಕಿ ಓರ್ವರು ಪುತ್ತೂರು ಪರ್ಲಡ್ಕ ಗೋಳಿಕಟ್ಟೆ ನಿವಾಸಿ ಉದ್ಯಮಿ ಖಲಂದರ್(39) ಎಂಬವರಾಗಿದ್ದಾರೆ.

ಖಲಂದರ್ ಈ ಹಿಂದೆ ಕಲ್ಲೇಗದಲ್ಲಿ ವಾಸವಿದ್ದು, ಪ್ರಸ್ತುತ ಪರ್ಲಡ್ಕದ ಗೋಳಿಕಟ್ಟೆಯಲ್ಲಿ ವಾಸ್ತವ್ಯ ಹೊಂದಿದ್ದರು. ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಅವರು ಕೆಲಸದ ನಿಮಿತ್ತ ತುಮಕೂರಿಗೆ ಹೋಗಿದ್ದ ವೇಳೆ ತುಮಕೂರು ಮಡಿವಾಳ ರಸ್ತೆಯಲ್ಲಿ ಖಲಂದರ್ ಚಲಾಯಿಸುತ್ತಿದ್ದ ಸ್ಕೂಟರ್ ಮತ್ತು ವಿರುದ್ಧ ಡಿಕ್ಕಿನಿಂದ ಬರುತ್ತಿದ್ದ ಸ್ಕೂಟರ್ ಗಳೆಡರ ಮಧ್ಯೆ ಅಪಘಾತ ಸಂಭವಿಸಿದೆ.
ಅಪಘಾತದಿಂದ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಸ್ಕೂಟರ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಗಂಭೀರ ಗಾಯಗೊಂಡಿದ್ದ ಖಲಂದರ್ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಮೃತರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

























