ಉಪ್ಪಿನಂಗಡಿ: 34ನೇ ನೆಕ್ಕಿಲಾಡಿ ಗ್ರಾ.ಪಂ.ನ ಪ್ರಭಾರ ಪಿಡಿಓ ಆಗಿದ್ದ ಕುಮಾರಯ್ಯ (46) ರವರು ಹೃದಯಾಘಾತದಿಂದಾಗಿ ಇಂದು ಮುಂಜಾನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಕುಮಾರಯ್ಯ ರವರು ಬೆಳ್ತಂಗಡಿ ತಾಲೂಕಿನ ಕುದ್ರಡ್ಕ ನಿವಾಸಿಯಾಗಿದ್ದು, ಈ ಹಿಂದೆ ಮಚ್ಚಿನ ಗ್ರಾ.ಪಂ.ನಲ್ಲಿ ಗುಮಾಸ್ತರಾಗಿ ಕೆಲಸ ನಿರ್ವಹಿಸುತ್ತಿದ್ದರು.

ಒಂದೂವರೆ ವರ್ಷಗಳ ಹಿಂದೆ ಪದೋನ್ನತಿಗೊಂಡು 34 ನೆಕ್ಕಿಲಾಡಿ ಗ್ರಾ.ಪಂ. ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಅಲ್ಲಿ ಪಿಡಿಓ ಸ್ಥಾನ ಖಾಲಿ ಇದ್ದುದ್ದರಿಂದ ಪ್ರಭಾರ ಪಿಡಿಓ ಆಗಿ ನಿಯೋಜನೆಗೊಂಡಿದ್ದರು.
ಮೃತರು ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
























