ವಿಟ್ಲ: ಜೇಸಿಐ ವಿಟ್ಲ ಘಟಕದ ಜೆಜೇಸಿ ವಿಂಗ್ ವನಮಹೋತ್ಸವ ‘ಗೊ ಗ್ರೀನ್ ವೀಕ್’ ಕಾರ್ಯಕ್ರಮವನ್ನು ಪೂರ್ವಾಧ್ಯಕ್ಷರಾದ ಜೇಸಿ ಭಾಸ್ಕರ್ ಶೆಟ್ಟಿ ರವರ ಕೊಲ್ಯ ಮನೆಯಲ್ಲಿ ಜೂ.26 ರಂದು ಆಯೋಜಿಸಲಾಗಿತ್ತು.
ಜೆಜೇಸಿ ಸದಸ್ಯೆ ನಿಹಾರಿಕಾ ವೇದಿಕೆಗೆ ಅತಿಥಿಗಳನ್ನು ಆಹ್ವಾನಿಸಿದರು. ಅಧ್ಯಕ್ಷೆ ಜೆಜೇಸಿ ಖುಷಿ ರೈ ಸಭಾಧ್ಯಕ್ಷತೆ ವಹಿಸಿ ಅತಿಥಿಗಳನ್ನು ಸ್ವಾಗತಿಸಿದರು.

ಜೆಜೇಸಿ ಸದಸ್ಯ ಮಂಥನ್ ಶೆಟ್ಟಿ ಜೇಸಿ ವಾಣಿ ವಾಚಿಸಿದರು. ಜೆಜೇಸಿ ಹವನ್ ಅತಿಥಿಗಳ ಪರಿಚಯ ನೀಡಿದರು. ಜೆಜೇಸಿ ವಲಯ ಸಂಯೋಜಕರಾದ ರಾಘವೇಂದ್ರ ಪ್ರಭು ಕರ್ವಲೋ ಮುಖ್ಯ ಅತಿಥಿಯಾಗಿ ಆಗಮಿಸಿ ಶುಭ ಹಾರೈಸಿದರು. ವಲಯಧಿಕಾರಿ ಜೇಸಿ ದಿನೇಶ್ ಶೆಟ್ಟಿ ಶುಭ ಹಾರೈಸಿದರು. ಜೆಜೇಸಿ ಸಾನ್ವಿ ವಂದನಾರ್ಪಣೆಗೈದರು.


























