ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ಕೆರೆಮೂಲೆಯಲ್ಲಿ ಇಬ್ಬರ ನಡುವೆ ಹಲ್ಲೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೆರೆಮೂಲೆ ದಿ.ಮೊಯಿದು ಕುಂಞ ಅವರ ಪುತ್ರ ಅಬ್ದುಲ್ ಖಾದರ್ (57) ಮತ್ತು ಕೆರೆಮೂಲೆ ದಿ.ಅಬೂಬಕ್ಕರ್ ಅವರ ಪುತ್ರ ಅಬ್ದುಲ್ ಖಾದರ್ (63) ರವರು ಪರಸ್ಪರ ಹಲ್ಲೆ ನಡೆಸಿಕೊಂಡವರು.
ಕೆರೆಮೂಲೆ ನಿವಾಸಿ ನಾಟಿ ವೈದ್ಯ ಅಬ್ದುಲ್ ಖಾದರ್(63)ರವರು, ‘ನಾನು ಕೆರೆಮೂಲೆಯಲ್ಲಿ ಸ್ಕೂಟರ್ ನಿಲ್ಲಿಸಿ ನಿಂತಿದ್ದ ವೇಳೆ ಅಬ್ದುಲ್ ಖಾದರ್ ಅವರು ಅಲ್ಲಿಗೆ ಬಂದು ನನಗೆ ಸಿಗುವ ಅಡುಗೆಯನ್ನು ತಪ್ಪಿಸಿ ಬೇರೆಯವರಿಗೆ ಕೋಡಿಸಿದ್ದಿಯಾ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಸ್ಕೂಟರ್‌ನಲ್ಲಿದ್ದ ಹೆಲೈಟ್‌ನಿಂದ ನನಗೆ ಹಲ್ಲೆ ನಡೆಸಿದ್ದಾರೆ. ಬಳಿಕ ಅವರ ಪುತ್ರ ಸಿರಾಜ್ ಅಲ್ಲಿಗೆ ಬಂದು ಹಲ್ಲೆ ನಡೆಸಿದ್ದಾರೆ’ ಎಂದು ಆರೋಪಿಸಿದ್ದಾರೆ.
ಕೆರೆಮೂಲೆ ನಿವಾಸಿ ಅಬ್ದುಲ್ ಖಾದರ್ (52)ರವರು, ‘ನಾನು ಚಹಾ ಕುಡಿಯಲು ತೆರಳುತ್ತಿದ್ದ ವೇಳೆ ಅಬ್ದುಲ್ ಖಾದರ್ ಎಂಬವರು ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೈಯಲ್ಲಿದ್ದ ಸಣ್ಣ ಪಿಕ್ಕಾಸ್‌ನಿಂದ ನನ್ನ ತಲೆ, ಎದೆಗೆ ಮತ್ತು ಕೈಗೆ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ್ದಾರೆ’ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಇಬ್ಬರೂ ಪರಸ್ಪರ ದೂರು ನೀಡಿದ ಹಿನ್ನೆಲೆ, ಠಾಣೆಯಲ್ಲಿ ಇಬ್ಬರ ಮೇಲೂ ಪ್ರಕರಣ ದಾಖಲಾಗಿದೆ.


























