ಪುತ್ತೂರು: ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿದ್ದ ಲೋಕೇಶ್ ಸಿ ರವರು ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಯಾಗಿ ಮಂಗಳೂರಿಗೆ ವರ್ಗಾವಣೆಗೊಂಡಿದ್ದು, ಈ ಹಿನ್ನೆಲೆ ಹಾರಾಡಿ ಶಾಲೆಯಿಂದ ಅವರಿಗೆ ಗೌರವಾರ್ಪಣೆ ಮಾಡಲಾಯಿತು.
ಲೋಕೇಶ್ ರವರು ತಮ್ಮ ಕರ್ತವ್ಯ ಅವಧಿಯಲ್ಲಿ ಪುತ್ತೂರು ತಾಲೂಕಿನ ಶೈಕ್ಷಣಿಕ ಮಟ್ಟವನ್ನು ಹಾಗೂ ಶಾಲೆಗಳ ಭೌತಿಕ ಸೌಲಭ್ಯಗಳನ್ನು ಬಹಳಷ್ಟು ಅಭಿವೃದ್ಧಿಗೊಳಿಸಿದ್ದು, ಹಾಗೂ ಹಾರಾಡಿ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಮತ್ತು ಮಕ್ಕಳ ಸಂಖ್ಯೆಗಳನ್ನು ಹೆಚ್ಚಿಸುವಲ್ಲಿ ಬಹಳಷ್ಟು ಸಹಕಾರವನ್ನು ನೀಡಿರುತ್ತಾರೆ.

ಇವರ ನಿರ್ದೇಶನದಲ್ಲಿ ನಡೆದಂತಹ ನಾಟಕ ‘ಭರವಸೆಯೇ ಬಾಳಿನ ಬೆಳಕು’ ಇದರಲ್ಲಿ ಹಾರಾಡಿ ಶಾಲೆಯ ವಿದ್ಯಾರ್ಥಿಗಳಿಗೂ ಅವಕಾಶ ನೀಡಿರುತ್ತಾರೆ ಎಂದು ಶಾಲಾ ಮುಖ್ಯಸ್ಥರು ಹೇಳಿದರು.
ಲೋಕೇಶ್ ರವರನ್ನು ಹಾರಾಡಿ ಶಾಲೆಯ ಎಸ್ಡಿಎಂಸಿ ಅಧ್ಯಕ್ಷರಾದ ಕೃಷ್ಣ ನಾಯ್ಕ ಮತ್ತು ಸದಸ್ಯರು ಹಾಗೂ ಶಾಲಾ ಮುಖ್ಯಗುರುಗಳಾದ ಕೆ.ಕೆ.ಮಾಸ್ಟರ್ ರವರು ಗೌರವಾರ್ಪಣೆ ನೀಡಿ ಬೀಳ್ಕೊಟ್ಟರು.



























