ರಾಜಸ್ಥಾನದ ಉದಯ ಪುರದಲ್ಲಿ ಕನ್ನಯ್ಯ ಲಾಲ್ ಎಂಬ ಟೈಲರ್ ಅನ್ನು ಹತ್ಯೆ ಮಾಡಿದ ಪ್ರಕರಣವನ್ನು ದ.ಕ. ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಉಪಾಧ್ಯಕ್ಷರಾದ ಪ್ರಹ್ಲಾದ್ ಬೆಳ್ಳಿಪ್ಪಾಡಿ ರವರು ಖಂಡಿಸಿದ್ದು, ನಾಗರೀಕ ಸಮಾಜದಲ್ಲಿ ಹಾಗೂ ಪ್ರಜಾಪ್ರಭುತ್ವದಲ್ಲಿ ಈ ಹತ್ಯೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ದುಡಿದು ತಿನ್ನುವ ಅಮಾಯಕ ಟೈಲರ್ ನನ್ನು ಈ ರೀತಿಯಾಗಿ ಹತ್ಯೆಗೈಯುವುದು ಪೈಶಾಚಿಕ ಕೃತ್ಯವಾಗಿದೆ. ಇಂತಹ ನರ ರಾಕ್ಷಸರಿಗೆ ಅತೀ ಕಠಿಣ ಶಿಕ್ಷೆಯನ್ನು ನೀಡಿದರೂ ಅದು ಕಡಿಮೆಯೇ, ಅಮಾಯಕರನ್ನು ಹತ್ಯೆಗೈದು ಧರ್ಮ ರಕ್ಷಣೆ ಮಾಡಿ ಎಂದು ಯಾವ ಧರ್ಮದಲ್ಲಿಯೂ ಇಲ್ಲ..
ಈ ರೀತಿಯ ದುಷ್ಕೃತ್ಯವೆಸಗಿದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ಇನ್ನೊಮ್ಮೆ ಈ ರೀತಿಯ ಕೃತ್ಯವೆಸಗಲು ಧೈರ್ಯ ಮಾಡುವವರು ಭಯ ಪಡುವ ರೀತಿ ಮಾಡಬೇಕು. ಅಷ್ಟೇ ಅಲ್ಲದೇ ಇಂತಹ ಕೃತ್ಯ ವೆಸಗಲು ಕುಮ್ಮಕ್ಕು ನೀಡಿದವರ ಮೇಲೂ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.



























