ವಿಟ್ಲ: 2022-2023ನೇ ಸಾಲಿನ ಲಯನ್ಸ್ ಜಿಲ್ಲೆ 317 – ಡಿ (ಹಾಸನ ಕೊಡಗು ಚಿಕ್ಕಮಗಳೂರು ದಕ್ಷಿಣ ಕನ್ನಡ ಜಿಲ್ಲೆಗಳನ್ನು ಒಳಗೊಂಡ) ಪ್ರಾಂತ್ಯ 7 ರ ಪ್ರಾಂತೀಯ ಅಧ್ಯಕ್ಷರಾಗಿ ವಿ ಸುದರ್ಶನ್ ಪಡಿಯಾರ್ ರವರನ್ನು ಲಯನ್ ಜಿಲ್ಲೆ 317 ಡಿ ಯ ಗವರ್ನರ್ ಸಂಜೀತ್ ಶೆಟ್ಟಿ ಯವರು ನೇಮಕಗೊಳಿಸಿದ್ದು, ಜುಲೈ 1 ರಂದು ಸುದರ್ಶನ್ ಪಡಿಯಾರ್ ರವರು ಅಧಿಕಾರ ಸ್ವೀಕರಿಸಿದರು.

ಸುದರ್ಶನ್ ಪಡಿಯಾರ್ ರವರು ಲಯನ್ಸ್ ಜಿಲ್ಲೆಯ 317 ಡಿ ಯ ನಂ.1 ಅಧ್ಯಕ್ಷರಾಗಿ 2016-17 ರಲ್ಲಿ ಮೂಡಿಬಂದಿದ್ದು, ನಂತರ ವಲಯ ಅಧ್ಯಕ್ಷರಾಗಿ , ತದನಂತರ ಪ್ರಾಂತೀಯ ಗವರ್ನರ್ ಸಲಹೆಗಾರರಾಗಿ, ಪ್ರಾಂತೀಯ ಸಲಹೆಗಾರನಾಗಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ.

ಇವರು ವಿಟ್ಲ ಪ್ರಶಸ್ತಿ ವಿಜೇತ ಯುವಕಮಂಡಲದ ಅಧ್ಯಕ್ಷರಾಗಿ 10 ವರ್ಷಗಳ ಕಾಲ ಸೇವೆಸಲ್ಲಿಸಿದ್ದು, ನಂತರ ಗೌರವಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಬಂಟ್ವಾಳ ತಾಲೂಕು ಯುವ ಜನ ಒಕ್ಕೂಟದ ಅಧ್ಯಕ್ಷರಾಗಿ, ಗೌರವಾಧ್ಯಕ್ಷರಾಗಿ, ವಿಟ್ಲ ಹೈಸ್ಕೂಲ್ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ, ವಿಟ್ಲ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ, ಸೈಂಟ್ ರೀಟಾ ಶಾಲೆಯ ಅಭಿವೃದ್ಧಿ ಸಮಿತಿಯ ಗೌರವ ಸಲಹೆಗಾರರಾಗಿ, ರಾಜ್ಯ ಮಟ್ಟದ ಯುವಜನ ಮೇಳದ ಪ್ರಮುಖ ಸಂಘಟಕರಾಗಿ, ದೇವತಾ ಸಮಿತಿಯ ಜತೆ ಕಾರ್ಯದರ್ಶಿಯಾಗಿ, ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕರಾಗಿ, ಸ್ಕೌಟ್ ಆ್ಯಂಡ್ ಗೈಡ್ಸ್ ಸಂಸ್ಥೆ ವಿಟ್ಲ ಇದರ ಉಪಾಧ್ಯಕ್ಷರಾಗಿ, 2021 -2022 ನೇ ಸಾಲಿನಲ್ಲಿ ಜಿಲ್ಲೆಯಲ್ಲೇ ವಿಟ್ಲ ಲಯನ್ಸ್ ಸಿಟಿ ಕ್ಲಬ್ ಸ್ಥಾಪಿಸಿದ ಹೆಗ್ಗಳಿಕೆ ಇವರದ್ದು.






























