ಸುಳ್ಯ: ವಿದ್ಯುತ್ ಶಾಕ್ ಹೊಡೆದು ಐದು ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಐವರ್ನಾಡಿನಲ್ಲಿ ನಡೆದಿದೆ.
ಕೆದಂಬಾಡಿ ಸನ್ಯಾಸಿಗುಡ್ಡ ನಿವಾಸಿ ಹೈದರಾಲಿ ಎಂಬವರ ಪುತ್ರ ಮಹಮದ್ ಆದಿಲ್ (5) ಮೃತ ಬಾಲಕ.

ಹೈದರಾಲಿ ರವರ ಪತ್ನಿ ಮತ್ತು ಅವರ ಮಗ ಆದಿಲ್ ಕೆಲ ದಿನಗಳ ಹಿಂದೆ ಪತ್ನಿ ತಾಯಿಯ ಮನೆಗೆ ತೆರಳಿದ್ದು, ಜು.2 ರಂದು ಆಟವಾಡುತ್ತಿದ್ದ ಬಾಲಕ ಆದಿಲ್ ಫ್ರಿಡ್ಜ್ ಮುಟ್ಟಿದಾಗ ಆಕಸ್ಮಿಕವಾಗಿ ವಿದ್ಯುತ್ ಶಾಕ್ ಹೊಡೆದು ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್ 19/2022 ಕಲಂ 174 ಸಿ.ಆರ್.ಪಿ.ಸಿ. ರಂತೆ ಪ್ರಕರಣ ದಾಖಲಾಗಿದೆ.