ವಿಟ್ಲ: ಭಾರೀ ಮಳೆಗೆ ರಸ್ತೆಗೆ ಗುಡ್ಡ ಕುಸಿದು ಬೈಕ್ ಸವಾರ ಅದೃಷ್ಟವಶಾತ್ ಅಪಾಯದಿಂದ ಪಾರಾದ ಘಟನೆ ಜು.5 ರಂದು ಪೆರ್ಲ-ವಿಟ್ಲ ರಸ್ತೆಯ ಸಾರಡ್ಕ ಎಂಬಲ್ಲಿ ನಡೆದಿದೆ.

ರಸ್ತೆಗೆ ಗುಡ್ಡ ಕುಸಿದ ಪರಿಣಾಮ ದ್ವಿಚಕ್ರ ವಾಹನ ಜಖಂಗೊಂಡಿದ್ದು, ರಸ್ತೆಯನ್ನು ಬಂದ್ ಮಾಡಿ ತೆರವು ಕಾರ್ಯ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಗುಡ್ಡ ರಸ್ತೆಗೆ ಬಿದ್ದ ಕಾರಣ ರಸ್ತೆ ಸಂಚಾರದಲ್ಲಿ ಅಸ್ತವ್ಯಸ್ತವಾಗಿದೆ.