ಸೌತಡ್ಕ: 60ನೇ ವಿವಾಹ ವಾರ್ಷಿಕೋತ್ಸವದ ಸವಿನೆನಪಿಗಾಗಿ ಸೇವಾಭಾರತಿಯಲ್ಲಿ ನೋಂದಾಯಿತರಾದ 10 ಮಂದಿ ಬೆನ್ನುಹುರಿ ಅಪಘಾತಕ್ಕೆ ಒಳಗಾದ ದಿವ್ಯಾಂಗರಿಗೆ ಬಾಮ ಮತ್ತು ಗೋಪಾಲಾಚಾರಿಯವರು ಕೊಡುಗೆ ನೀಡಿ ಮಾದರಿಯಾದರು.

ದಾನಿಗಳ ಅನುಪಸ್ಥಿತಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಸೌತಡ್ಕ ಶ್ರೀಮಹಾಗಣಪತಿ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಕೊಕ್ಕಡ ಕೃಷ್ಣ ಭಟ್ ರವರು ಗಾಲಿಕುರ್ಚಿಗಳನ್ನು ವಿತರಿಸಿ ದಾನಿಗಳಾದ ದಂಪತಿಗಳನ್ನು ಕೊಂಡಾಡಿ ಸೇವಾಕಾರ್ಯಗಳು ನಿತ್ಯದ ಕಾಯಕ ಆಗಬೇಕೆಂದು ಆಶಿಸಿ ದಾನಿಗಳಿಗೆ ಶುಭಹಾರೈಸಿದರು.
ಸಂಸ್ಥೆಯ ಅಧ್ಯಕ್ಷರಾದ ಕೆ ವಿನಾಯಕ ರಾವ್ ಪ್ರಸ್ತಾವಿಕವಾಗಿ ಮಾತನಾಡಿ, ಫಲಾನುಭವಿಗಳಿಗೆ ಆರೋಗ್ಯದ ರಕ್ಷಣೆ ಮತ್ತು ಸ್ವಾವಲಂಬಿ ಬದುಕಿಗೆ ಪ್ರೇರಣೆ ನೀಡಿದರು.
ಚರಣ್ ನಿರೂಪಿಸಿದ ಕಾರ್ಯಕ್ರಮದಲ್ಲಿ, ಪಿಯರ್ ಟ್ರೈನರ್ ಮೋಹನ್ ಸ್ವಾಗತಿಸಿ ಜೋಸ್ಫಿನಾ ವಂದಿಸಿದರು.


























