ಪುತ್ತೂರು: ತಾಲೂಕು ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿಯಲ್ಲಿರುವ ಗ್ರಾಮ ಅರಣ್ಯ ಸಮಿತಿ ಕಟ್ಟಡದ ಬಾಗಿಲಿಗೆ ಹೆಬ್ಬಾವನ್ನು ಕೊಂದು ಕಟ್ಟಿ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ಅರಣ್ಯ ಇಲಾಖೆ ಸಿಬ್ಬಂದಿಗಳು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಾದ ಕೊಳ್ತಿಗೆ ಗ್ರಾಮದ ಶೇಡಿಗುರಿ ನಿವಾಸಿ ಧನಂಜಯ(38) ಮತ್ತು ಜಯ(38) ರನ್ನು ಅರಣ್ಯ ಇಲಾಖೆ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ನ್ಯಾಯಾಲಯವು ಆರೋಪಿಗಳಿಗೆ ಜು.15 ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಆರೋಪಿಗಳು ಮನೆ ಬಳಿ ಬಂದಿದ್ದ ಹೆಬ್ಬಾವನ್ನು ಹಿಡಿದು ಕಟ್ಟಡದ ಬಾಗಿಲ ಬೀಗಕ್ಕೆ ಕಟ್ಟಿದ್ದು, ಈ ಹಿನ್ನೆಲೆ ಹೆಬ್ಬಾವು ಸತ್ತಿದ್ದು, ಹೆಬ್ಭಾವನ್ನು ಕೊಲ್ಲುವುದು 1972 ರ ವನ್ಯಜೀವಿ ಸಂರಕ್ಷಣಾ ಕಾಯ್ದೆ ಪ್ರಕಾರ ಜಾಮೀನು ರಹಿತ ಅಪರಾಧವಾಗಿದೆ.

ಕಾರ್ಯಾಚರಣೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಯವರಾದ ವೈ.ಕೆ ದಿನೇಶ್ ಕುಮಾರ್ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ವಿ.ಪಿ ಕಾರ್ಯಪ್ಪ ರವರ ನಿರ್ದೇಶನದಂತೆ ವಲಯ ಅರಣ್ಯಾಧಿಕಾರಿಗಳಾದ ಕಿರಣ್ ಬಿ.ಎಮ್. ಉಪ ವಲಯ ಅರಣ್ಯಾಧಿಕಾರಿಗಳಾದ ಲೋಕೇಶ್ ಎಸ್. ಎನ್., ಅರಣ್ಯ ರಕ್ಷಕರುಗಳಾದ ದೀಪಕ್, ನಿಂಗರಾಜ್ ಮತ್ತು ಇಲಾಖೆ ವಾಹನ ಚಾಲಕರಾದ ಜಗದೀಶ್ ಪಾಲ್ಗೊಂಡಿದ್ದರು.
























