ವಿಟ್ಲ: ಭಾರೀ ಮಳೆಗೆ ಬೃಹತ್ ಗಾತ್ರದ ಮರವೊಂದು ಮನೆ ಮೇಲೆ ಉರುಳಿ ಬಿದ್ದ ಘಟನೆ ಕೊಳ್ನಾಡು ಗ್ರಾಮದ ಸೇರ್ಕಳ ಎಂಬಲ್ಲಿ ನಡೆದಿದೆ.

ಕೊಳ್ನಾಡು ಗ್ರಾಮದ ಸೇರ್ಕಳ ಸಂಕಪ್ಪ ಸಪಲ್ಯ ರವರ ಮನೆ ಮೇಲೆ ಬೃಹತ್ ಗಾತ್ರದ ಮರ ಉರುಳಿ ಬಿದ್ದಿದ್ದು, ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.

ಸ್ಥಳಕ್ಕೆ ಕೊಳ್ನಾಡು ಗ್ರಾಮಕರಣಿಕರಾದ ಮಂಜುನಾಥ್, ಪಿಡಿಒ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



























