ಪುತ್ತೂರು : ಭಾರತೀಯ ಸೇನೆಗೆ (ಬಿ. ಎಸ್. ಎಫ್) ಆಯ್ಕೆಗೊಂಡ ಬಲ್ನಾಡು ಗ್ರಾಮದ ದೇವಸ್ಯ ಪರಜಾಲು ಪದ್ಮಯ್ಯ ಗೌಡ ಮತ್ತು ತೇಜವತಿಯವರ ಪುತ್ರಿ ರಮ್ಯ ಡಿ ಮತ್ತು ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆಗೊಂಡ ಬಲ್ನಾಡು ಕೆಲ್ಲಾಡಿ ಸುಶೀಲ ಮತ್ತು ದಿ. ವೀರಪ್ಪ ಗೌಡರ ಪುತ್ರಿ ವಿನುಶ್ರೀಯವರನ್ನು ಶಾಸಕ ಸಂಜೀವ ಮಠಂದೂರು ಅಭಿನಂದಿಸಿದರು. ಮಾ.29ರಂದು ಸಂಜೆ ಅವರಿಬ್ಬರ ಮನೆಗೆ ತೆರಳಿದ ಶಾಸಕರು ಅವರಿಗೆ ಶಾಲು ಹೊದೆಸಿ ಗೌರವಿಸಿದರು.
ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್, ಸದಸ್ಯೆ ಪೂರ್ಣಿಮಾ ಕೋಡಿಯಡ್ಕ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಾಧವ ಗೌಡ ಕಾಂತಿಲ, ಸದಸ್ಯ ಕಿರಣ್ ರೈ, ಪ್ರಕಾಶ್ ಕಿಲ್ಲಾಡಿ, ರಾಮದಾಸ್ ಹಾರಾಡಿ, ಜೀವನ್ ಮತ್ತಿತರರು ಉಪಸ್ಥಿತರಿದ್ದರು.