ಪುತ್ತೂರು : ನಿಲ್ಲಿಸಿದ್ದ ಟಿಪ್ಪರ್ ವಾಹನವೊಂದು ಹ್ಯಾಂಡ್ ಬ್ರೇಕ್ ಫೇಲ್ ಆದ ಕಾರಣ ಎದುರುಗಡೆ ನಿಲ್ಲಿಸಿದ್ದ ಮೂರು ಕಾರುಗಳಿಗೆ ಡಿಕ್ಕಿ ಹೊಡೆದ ಘಟನೆ ಪುತ್ತೂರಿನ ಕೋರ್ಟ್ ಮುಂಭಾಗದ ರಸ್ತೆಯಲ್ಲಿ ನಡೆದಿದೆ. ಈ ಘಟನೆಯಲ್ಲಿ ಕಾರುಗಳು ಜಖಂ ಗೊಂಡಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ತಪ್ಪಿದ ಭಾರಿ ಅನಾಹುತ: ನ್ಯಾಯಾಲಯದ ಬಳಿಯಿಂದ ಕೋರ್ಟ್ ರಸ್ತೆಯ ನಾಲ್ಕು ಮಾರ್ಗ ಸೇರುವ ಸ್ಥಳದ ತನಕ ಭಾರಿ ಇಳಿಜಾರು ರಸ್ತೆಯಾಗಿದ್ದು ದಿನ ನಿತ್ಯ ನೂರಾರು ಮಂದಿ ಸಾರ್ವಜನಿಕರು ಸಂಚರಿಸುವ ಸ್ಥಳವಾದ್ದರಿಂದ ಟೆಂಪೊ ಒಂದು ವೇಳೆ ನೇರ ಇಳಿಮುಖ ರಸ್ತೆಯಾಗಿ ಮುಂದೆ ಚಲಿಸುತ್ತಿದ್ದರೆ ಪ್ರಾಣಾಪಾಯ ಆಗುವ ಸಾದ್ಯತೆ ಇತ್ತು. ಆದರೆ ನ್ಯಾಯಾಲಯದ ಮುಂದೆ ರಸ್ತೆ ಬದಿಯಲ್ಲಿದ್ದ ಕಾರುಗಳಿಗೆ ಟೆಂಪೊ ಡಿಕ್ಕಿಯಾಗಿ ನಿಂತಿದ್ದ ಪರಿಣಾಮ ಭಾರಿ ಅಪಾಯ ತಪ್ಪಿದೆ.