ಪುತ್ತೂರು: ಸಂತ ಫಿಲೋಮಿನಾ ಕಾಲೇಜು ಹಿರಿಯ ವಿದ್ಯಾರ್ಥಿಗಳಿಂದ 1983ರಲ್ಲಿ ಆರಂಭಿಸಲ್ಪಟ್ಟ ಶ್ರೀ ಗಣೇಶೋತ್ಸವಕ್ಕೆ ಪ್ರಸ್ತುತ 40ರ ಸಂಭ್ರಮವಾಗಿದ್ದು, ದರ್ಬೆ ವಿನಾಯಕ ನಗರದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ವಿಜೃಂಭಣೆಯ ಗಣೇಶೋತ್ಸವಕ್ಕೆ ವಿಗ್ರಹ ಮುಹೂರ್ತವು ಜು.8 ರಂದು ನಡೆಯಿತು.

ವಿಗ್ರಹ ರಚನೆಕಾರ ತಾರಾನಾಥ ಆಚಾರ್ಯ ರವರ ನೇತೃತ್ವದಲ್ಲಿ ಪರ್ಲಡ್ಕದಲ್ಲಿ ಮುಹೂರ್ತವು ಜರುಗಿತು.

ಈ ಸಂದರ್ಭದಲ್ಲಿ ಪ್ರಕಾಶ್, ನಾಗೇಶ್ ಪೈ ಸಹಿತ ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


























