ಮಡಿಕೇರಿ: ಕೊಡಗಿನಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಗಾಳಿಬೀಡು ವ್ಯಾಪ್ತಿಯ ಒಂದನೇ ಮೊಣ್ಣಂಗೇರಿಯಲ್ಲಿ ಗುಡ್ಡ ಕುಸಿದು ಅಪಾರ ಪ್ರಮಾಣ ನಷ್ಟ ಸಂಭವಿಸಿದೆ.
ಗ್ರಾಮದ ಐರೀರ ವೆಂಕಪ್ಪ ಅವರ ಮನೆಯ ಮುಂದಿನ ತೋಟದ ಅರ್ಧ ಭಾಗ ಕುಸಿತಗೊಂಡಿದ್ದು, ಸುಮಾರು 35 ಕಾಫಿಗಿಡಗಳು ನಾಶವಾಗಿದೆ. ಅಲ್ಲದೆ ವೆಂಕಪ್ಪ ಅವರ ಮನೆ ಅಪಾಯದ ಸ್ಥಿತಿಯಲ್ಲಿದೆ.
ಗುಡ್ಡ ಕುಸಿದ ಸ್ಥಳದಲ್ಲಿ ನೀರು ಹರಿಯುತ್ತಿದ್ದು, ಮತ್ತಷ್ಟು ಕುಸಿಯುವ ಆತಂಕ ಎದುರಾಗಿದೆ. ಜನತೆ ಭೀತಿಗೆ ಒಳಗಾಗಿದ್ದಾರೆ.


























