ಪುತ್ತೂರು: ಭಾರೀ ಮಳೆಗೆ ಗುಡ್ಡ ಜರಿದು ಮನೆಗೆ ಹಾನಿ ಉಂಟಾದ ಘಟನೆ ಇರ್ದೆ ಗ್ರಾಮದ ಉಪ್ಪಳಿಗೆಯಲ್ಲಿ ನಡೆದಿದೆ.
ಇರ್ದೆ ಗ್ರಾಮದ ಉಪ್ಪಳಿಗೆ ನಿವಾಸಿ ಧನಂಜಯ ಎಂಬವರ ಮನೆಯ ಸಮೀಪ ಗುಡ್ಡವು ಭಾರೀ ಮಳೆಯಿಂದಾಗಿ ಜರಿದು ಬಿದ್ದಿದೆ.

ಗುಡ್ಡವು ಜರಿದು ರಸ್ತೆಯಂಚಿನಲ್ಲಿ ನಿಂತಿದ್ದು, ಇನ್ನೂ ಜರಿದಲ್ಲಿ ವಾಸ್ತವ್ಯದ ಮನೆಗೆ ಅಪಾಯವಾಗುವ ಸಂಭವವಿದೆ. ಪ್ರಕೃತಃ ರಸ್ತೆಗೆ ಬಿದ್ದಿರುವ ಮಣ್ಣನ್ನು ತೆರವುಗೊಳಿಸಿದಲ್ಲಿ ಮಣ್ಣು ಪುನಃ ಜಾರಿ ತೊಂದರೆಯಾಗುವ ಸಂಭವವಿದೆ.



























