ಬೆಟ್ಟಂಪಾಡಿ: ಮನೆಯ ಕುಡಿಯುವ ನೀರಿನ ಬಾವಿ ಕುಸಿದಿರುವ
ಘಟನೆ ಜು. 9 ರಂದು ರಾತ್ರಿ ಪಾಣಾಜೆ ಗ್ರಾಮದ ಗುವೆಲ್‌ಗದ್ದೆ ಎಂಬಲ್ಲಿ ನಡೆದಿದೆ.

ಪಾಣಾಜೆ ಗ್ರಾಮದ ಗುವೆಲ್‌ಗದ್ದೆ ನಿವಾಸಿ ಶಿವಪ್ರಸಾದ್
ಎಂಬವರ ಮನೆಯ ಕುಡಿಯುವ ನೀರಿನ ಬಾವಿ ಕುಸಿದಿದ್ದು, ಭಾರೀ ಮಳೆಯಿಂದಾಗಿ ಮನೆ ಸುತ್ತಮುತ್ತ ನೀರಿನ ಒರತೆ ಹರಿವು ಹೆಚ್ಚಾದ ಪರಿಣಾಮ ಬಾವಿ ಕುಸಿದಿದೆ ಎನ್ನಲಾಗಿದೆ.
ಮನೆಯ ಅತೀ ಸಮೀಪದಲ್ಲಿ ಬಾವಿ ಇರುವ ಕಾರಣ ಮನೆಯೂ
ಅಪಾಯದಂಚಿನಲ್ಲಿದೆ.




























