ವಿಟ್ಲ: ಪಟ್ಟಣ ಪಂಚಾಯತ್ ವ್ಯಾಪ್ತಿಯ 15ನೇ ವಾರ್ಡಿನಲ್ಲಿ ಎಸೆಸೆಲ್ಸಿ ಮತ್ತು ಪಿಯುಸಿ ಯಲ್ಲಿ 500 ಮತ್ತು ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ತನಿಯಪ್ಪ ಮೂಲ್ಯ ಇರುಂದೂರು-ಪಡೀಲ್ ರವರ ಮನೆಯಲ್ಲಿ ನಡೆಯಿತು.

ವಿದ್ಯಾರ್ಥಿಗಳಾದ ಶ್ರವಣ್ ನೆಕ್ಕಿಲಾರು, ಗ್ರೀಷ್ಮಾ ಪೊನ್ನೆತ್ತಾಡಿ, ಅನನ್ಯ ಇರುಂದೂರು, ವರ್ಷಾ ನೆಕ್ಕಿಲಾರು ರವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ವಿಟ್ಲ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಅರುಣ್ ವಿಟ್ಲ, ಪ್ರಧಾನ ಕಾರ್ಯದರ್ಶಿ ಕರುಣಾಕರ ನಾತ್ತೊಟ್ಟು, ಶಕ್ತಿಕೇಂದ್ರ ಅಧ್ಯಕ್ಷರಾದ ವೀರಪ್ಪ ಗೌಡ ರಾಯರಬೆಟ್ಟು, ನಿವೃತ್ತ ಸೈನಿಕರಾದ ಬಾಲಕೃಷ್ಣ ಗೌಡ ಪೊನ್ನೆತ್ತಾಡಿ, ಕಾರ್ಯದರ್ಶಿ ತೀರ್ಥೇಶ್ ಇರುಂದೂರು, ಬಿಜೆಪಿ ಮಹಾಶಕ್ತಿ ಕೇಂದ್ರ ಮಹಿಳಾ ಮೋರ್ಚಾದ ಕಾರ್ಯದರ್ಶಿ ಸಂಧ್ಯಾ ಗಣೇಶ್ ಕೈಂತಿಲ ಮತ್ತು ಭಾರತೀಯ ಜನತಾ ಪಾರ್ಟಿಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.




























