ಪುತ್ತೂರು: ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿಯ ಸಾಯಿ ಇಂಟರ್ ನ್ಯಾಷನಲ್ ಲಾಡ್ಜ್ ನ ಜನರೇಟರ್ ಬ್ಯಾಟರಿಯನ್ನು ಕಳವುಗೈದಿದ್ದಾರೆ ಎಂದು ಆರೋಪಿಸಿ ಲಾಡ್ಜ್ ನ ಮ್ಯಾನೇಜರ್ ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದಾರೆ.
ಸಾಯಿ ಇಂಟರ್ ನ್ಯಾಷನಲ್ ಲಾಡ್ಜ್ ನ ಮ್ಯಾನೇಜರ್ ಯೋಗೀಶ್ ರವರು ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದಾರೆ.
ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿಯಲ್ಲಿರುವ ಸಾಯಿ ಇಂಟರ್ ನ್ಯಾಷನಲ್ ಲಾಡ್ಜ್ ನ ಜನರೇಟರ್ ಬ್ಯಾಟರಿಯನ್ನು ಯಾರೋ ಕಳ್ಳರು ಕಳವುಗೈದಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಠಾಣೆಯಲ್ಲಿ ಅ.ಕ್ರ: 58/2022 ಕಲಂ 379 ಐಪಿಸಿರಂತೆ ಪ್ರಕರಣ ದಾಖಲಾಗಿದೆ..


























