ಪುತ್ತೂರು: ಕೆಲ ದಿನಗಳ ಹಿಂದೆ ಪುತ್ತೂರಿನ ಹಿತ ಆಸ್ಪತ್ರೆಯಿಂದ ಜನರೇಟರ್ ಬ್ಯಾಟರಿ ಕಳವುಗೈದಿದ್ದ ಮತ್ತು ಕೆ. ಎಸ್. ಆರ್. ಟಿ. ಸಿ ಬಸ್ ನಿಲ್ದಾಣದ ಬಳಿಯ ಸಾಯಿ ಇಂಟರ್ ನ್ಯಾಷನಲ್ ಲಾಡ್ಜ್ ನ ಜನರೇಟರ್ ಬ್ಯಾಟರಿಯನ್ನು ಕಳವುಗೈದಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಕೇರಳ ಮೂಲದ ಇಟ್ಟಿ ಪನ್ನಿಕರ್ ಎಂದು ಗುರುತಿಸಲಾಗಿದೆ.

ಆರೋಪಿಯು ಕೆಲ ದಿನಗಳ ಹಿಂದೆ ಪುತ್ತೂರಿನ ಹಿತ ಆಸ್ಪತ್ರೆಯಿಂದ ಜನರೇಟರ್ ಬ್ಯಾಟರಿ ಕಳವುಗೈದಿದ್ದ ಮತ್ತು ಕೆ. ಎಸ್. ಆರ್. ಟಿ. ಸಿ ಬಸ್ ನಿಲ್ದಾಣದ ಬಳಿಯಲ್ಲಿರುವ ಸಾಯಿ ಇಂಟರ್ ನ್ಯಾಷನಲ್ ಲಾಡ್ಜ್ ನ ಜನರೇಟರ್ ಬ್ಯಾಟರಿಯನ್ನು ಕಳವುಗೈದಿದ್ದ ಈ ಬಗ್ಗೆ ದೂರು ನೀಡಿದ್ದು, ಕಾರ್ಯಾಚರಣೆ ಆರಂಭಿಸಿದ ಪೊಲೀಸರು ಆರೋಪಿಯನ್ನು ಮತ್ತು ಸೊತ್ತನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಪುತ್ತೂರು ಪೊಲೀಸ್ ಉಪಾಧೀಕ್ಷಕ ರವರ ನಿರ್ದೆಶನದಂತೆ, ಪುತ್ತೂರು ನಗರ ಠಾಣಾ ಪೊಲೀಸ್ ನಿರೀಕ್ಷಕರಾದ ಸುನೀಲ್ ಕುಮಾರ್ ಮಾರ್ಗದರ್ಶನದಲ್ಲಿ, ಪಿ.ಎಸ್.ಐ.ರಾಜೇಶ್ ಕೆ.ವಿ. ನೇತೃತ್ವದಲ್ಲಿ,ಸಿಬ್ಬಂದಿಗಳಾದ ಹೆಚ್.ಸಿ. ಸ್ಕರಿಯಾ, ಜಗದೀಶ್, ಸುಬ್ರಮಣ್ಯ, ಪಿ.ಸಿ. ಕಿರಣಕುಮಾರ್ ಭಾಗವಹಿಸಿದ್ದರು.


























