ಪುತ್ತೂರು: ಭಾರೀ ಮಳೆಗೆ ಗುಡ್ಡ ಜರಿದು ಬಿದ್ದು ವ್ಯಕ್ತಿಯೋರ್ವರು ಗಂಭೀರ ಸ್ವರೂಪದ ಗಾಯಗಳಾದ ಘಟನೆ ಈಶ್ವರಮಂಗಲದ ಮುಂಡ್ಯ ಎಂಬಲ್ಲಿ ನಡೆದಿದೆ.

ಗಂಭೀರ ಗಾಯಗೊಂಡಿದವರನ್ನು ಗುಡ್ಡಪ್ಪ ಗೌಡ ಎಂದು ಗುರುತಿಸಲಾಗಿದೆ.
ಗುಡ್ಡಪ್ಪ ರವರು ಮನೆಯ ಕೊಟ್ಟಿಗೆ ಸಮೀಪದಲ್ಲಿದ್ದ ವೇಳೆ ಗುಡ್ಡ ಜರಿದು ಮೈ ಮೇಲೆ ಬಿದ್ದಿದೆ ಎನ್ನಲಾಗಿದೆ.

ಗಂಭೀರ ಗಾಯಗೊಂಡ ಅವರನ್ನು ಹಿಂದೂ ಜಾಗರಣ ವೇದಿಕೆ ಆಂಬ್ಯುಲೆನ್ಸ್ ಮೂಲಕ ಪುತ್ತೂರು ಖಾಸಗಿ ಆಸ್ಪತ್ರೆಗೆ ಕರೆ ತರಲಾಗಿದ್ದು, ಘಟನೆಯಿಂದಾಗಿ ಗುಡ್ಡಪ್ಪ ರವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದೆ.



























