ಕಡಬ: ಅಕ್ರಮವಾಗಿ ಜಾನುವಾರು ಸಾಗಾಟ ಮಾಡಲಾಗುತ್ತಿದ್ದ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಪೋಲಿಸರು ದಾಳಿ ನಡೆಸಿ ಓರ್ವನನ್ನು ವಶಕ್ಕೆ ಪಡೆದ ಘಟನೆ ಜು.11ರ ತಡರಾತ್ರಿ ನೂಜಿಬಾಳ್ತಿಲ ಗ್ರಾಮದ ಕನ್ವರೆ ಎಂಬಲ್ಲಿ ನಡೆದಿದೆ.
ಕನ್ವರೆ-ಕಳಾರ ರಸ್ತೆಯ ಕನ್ವರೆ ಕ್ರಾಸ್ ಬಳಿ ಆಪೆ ರಿಕ್ಷಾದಲ್ಲಿ ಜಾನುವಾರುವೊಂದನ್ನು ಸ್ಥಳೀಯ ವ್ಯಕ್ತಿಗಳು ಸಾಗಾಟ
ಮಾಡಿದ್ದು, ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ತೆರಳಿದಾಗ
ಜಾನುವಾರು ಹಾಗೂ ಜಾನುವಾರು ಸಾಗಾಟ ಮಾಡಿದವರು
ಪರಾರಿಯಾಗಿದ್ದಾರೆ.
ಈ ವೇಳೆ ಸಾಗಾಟ ಮಾಡಿದವರಲ್ಲಿ ಓರ್ವ ವ್ಯಕ್ತಿ ಪೋಲಿಸರಿಗೆ ಸಿಕ್ಕಿದ್ದು ಈತನನ್ನು ಪೋಲಿಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಪೋಲಿಸರು ಸ್ಥಳಕ್ಕೆ ತೆರಳಿದಾಗ ಜಾನುವಾರು ಪತ್ತೆಯಾಗಿಲ್ಲ,
ಓರ್ವನನ್ನು ವಶಕ್ಕೆ ತೆಗೆದುಕೊಂಡು ವಿಚಾರಿಸಿ ಬಿಡಲಾಗಿದೆ
ಎಂಬ ಮಾಹಿತಿ ಲಭಿಸಿದೆ..



























