ಪುತ್ತೂರು: ಕಟ್ಟೆ ಫ್ರೆಂಡ್ಸ್ ಬಲ್ನಾಡು ಇದರ ವತಿಯಿಂದ ಪ್ರಥಮ ವರ್ಷದ ಮಹಿಳೆಯರ ಹಾಗೂ ಪುರುಷರ, ಸಾರ್ವಜನಿಕ ಹಿಂದೂ ಬಾಂಧವರ ಕೆಸರ್‍ಡ್ ಒಂಜಿ ದಿನ ಕ್ರೀಡಾಕೂಟ – 2022 ಜು.24 ರಂದು ಬಲ್ನಾಡು ಭಟ್ಟಿ ವಿನಾಯಕ ದೇವಸ್ಥಾನದ ಎದುರಿನ ಗದ್ದೆಯಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಮಹಿಳಾ ಯೋಧೆಯಾಗಿರುವ ಬಲ್ನಾಡಿನ ಕುಮಾರಿ ರಮ್ಯ, ಪದ್ಮಶ್ರೀ ಪುರಸ್ಕತರಾಗಿರುವ ವಿಟ್ಲ ಅಮೈ ಮಹಾಲಿಂಗ ನಾಯ್ಕ್, ಹಾಗೂ ಪುತ್ತೂರು ಸರ್ಕಾರಿ ಆಸ್ಪತ್ರೆಯ ವೈದ್ಯರಾಗಿರುವ ಡಾ. ಅಜೇಯ್ ಕುಮಾರ್ ರವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.




























