ಬಂಟ್ವಾಳ: ಮಂಗ್ಲಿಮಾರ್ ಅಣ್ಣಪ್ಪ ಪಂಜುರ್ಲಿ ದೈವದ ಗಡಿಕಾರರದ ಬಡಾಜೆಗುತ್ತು ಶತಾಯುಷಿ ಬಾಲಕೃಷ್ಣ ಶೆಟ್ಟಿ (100) ರವರು ವಯೋಸಹಜವಾಗಿ ಸ್ವಗೃಹದಲ್ಲಿ ಜು.14 ರಂದು ನಿಧನರಾದರು.

ಬಾಲಕೃಷ್ಣ ಶೆಟ್ಟಿ ರವರು ಬಂಟ್ವಾಳ ಎಲ್ಡಿ ಬ್ಯಾಂಕಿನ ಸ್ಥಾಪಕ ನಿರ್ದೇಶಕ ಮತ್ತು ಅಮ್ಟಾಡಿ ಮಂಡಲ ಪಂಚಾಯತ್ನ ಅಧ್ಯಕ್ಷರಾಗಿದ್ದರು.
ಮೃತರು ಪುತ್ರ ಅಮ್ಟಾಡಿ ಮಂಗ್ಲಿಮಾರ್ ದೈವಸ್ಥಾನದ ಆಡಳಿತ ಮೊಕ್ತೇಸರ ರವಿಶಂಕರ ಶೆಟ್ಟಿ ಬಡಾಜೆ ಸಹಿತ ಇಬ್ಬರು ಪುತ್ರಿ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.


























