ಪುತ್ತೂರು: ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್.ಡಿ.ಎ) ಯು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಯು ಪುತ್ತೂರಿನ ಎ.ಪಿ.ಎಂ.ಸಿ ರಸ್ತೆಯಲ್ಲಿರುವ “ವಿದ್ಯಾಮಾತಾ ಅಕಾಡೆಮಿ”ಯಲ್ಲಿ ಜು. 24 ರಿಂದ ಪ್ರಾರಂಭಗೊಳ್ಳಲಿದೆ.
ಸದ್ಯ ಹೈಸ್ಕೂಲ್ ಹಂತದಿಂದ ಪದವಿ ಪೂರ್ವ 18 ವರ್ಷದ ವರೆಗಿನ ವಿದ್ಯಾರ್ಥಿಗಳು ಈ ತರಬೇತಿಯನ್ನು ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.ಎನ್.ಡಿ.ಎ ಪರೀಕ್ಷೆಗೆ 16.5 ವರ್ಷದಿಂದ 19 ವರ್ಷದ ವರೆಗಿನ ವಿದ್ಯಾರ್ಥಿಗಳು ಈ ಪರೀಕ್ಷೆ ಬರೆಯಲು ಅರ್ಹರಾಗಿರುತ್ತಾರೆ.
ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಪಿ.ಯು.ಸಿಯಲ್ಲಿ ವಿಜ್ಞಾನ ವಿಷಯವನ್ನು ಕಡ್ಡಾಯವಾಗಿ ಅಭ್ಯಾಸ ಮಾಡಬೇಕಾಗಿರುತ್ತದೆ. “ವಿದ್ಯಾಮಾತಾ ಅಕಾಡೆಮಿ”ಯಲ್ಲಿ ಪ್ರತೀ ಭಾನುವಾರ ಎನ್.ಡಿ.ಎ ತರಬೇತಿಯು ನಡೆಯಲಿದೆ. ಅಲ್ಲದೇ ವಿಶೇಷ ಆನ್ಲೈನ್ ತರಗತಿಗಳು ,ವಿಶೇಷ ಕಾರ್ಯಾಗಾರಗಳು ಕೂಡಾ ವಿದ್ಯಾರ್ಥಿಗಳಿಗೆ ನಡೆಯಲಿದೆ.
ಆಸಕ್ತ ವಿದ್ಯಾರ್ಥಿಗಳು 21.07.2022 ರ ಒಳಗಾಗಿ ವಿದ್ಯಾಮಾತಾ ಅಕಾಡೆಮಿಯಲ್ಲಿ ಪ್ರವೇಶಾತಿಯನ್ನು ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ :
ವಿದ್ಯಾಮಾತಾ ಅಕಾಡೆಮಿ
ಹಿಂದೂಸ್ತಾನ್ ಕಾಂಪ್ಲೆಕ್ಸ್,ಎಪಿಯಂಸಿ ರೋಡ್,ಸಿಟಿ ಆಸ್ಪತ್ರೆ ಹತ್ತಿರ, ಪುತ್ತೂರು ದ.ಕ 574201
ಫೋನ್ ನಂ. 9620468869/ 9148935808 / 8590773486 ಸಂಪರ್ಕಿಸಬಹುದಾಗಿದೆ.

























