ಬಂಟ್ವಾಳ: ಸೂರಿಕುಮೇರು ಜಂಕ್ಷನ್ ಬಳಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಯುವಲ್ಲಿ ರಸ್ತೆಯ ಮಧ್ಯೆ ಅಡುಗೆ ಎಣ್ಣೆ ಸಾಗಾಟದ ಟ್ಯಾಂಕರ್ ಕೆಟ್ಟು ನಿಂತ ಘಟನೆ ನಡೆದಿದೆ.
ರಸ್ತೆಯ ಮಧ್ಯೆ ಅಡುಗೆ ಎಣ್ಣೆ ಸಾಗಾಟದ ಟ್ಯಾಂಕರ್ ಕೆಟ್ಟು ನಿಂತ ಪರಿಣಾಮ ರಸ್ತೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿ ಕಿಲೋ ಮೀಟರ್ ಗಟ್ಟಲೆ ವಾಹನಗಳು ಸಾಲಾಗಿ ನಿಂತಿದೆ.

ಸ್ಥಳದಲ್ಲಿ ಪೊಲೀಸರು ಮತ್ತು ಸ್ಥಳೀಯ ಯುವಕರು ವಾಹನಗಳ ಸಂಚಾರಕ್ಕೆ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.


























