ಬೆಳ್ತಂಗಡಿ: ನೇತ್ರಾವತಿ ಸ್ನಾನಘಟ್ಟಕ್ಕೆ ಇಳಿದ ಯುವತಿಯೊಬ್ಬಳು ನಾಪತ್ತೆಯಾದ ಘಟನೆ ಇಂದು ಬೆಳಗ್ಗೆ ನಡೆದಿದೆ.
ಯುವತಿಯೋರ್ವಳು ಇಂದು ಬೆಳಗ್ಗೆ ಧರ್ಮಸ್ಥಳ ಕ್ಷೇತ್ರ ದರ್ಶನಕ್ಕೆ ಬಂದು ತದ ನಂತರ ಆಟೋದಲ್ಲಿ ಬಂದು ಸ್ನಾನ ಮಾಡಲು ಸ್ನಾನಘಟ್ಟದ ಮೆಟ್ಟಲಿನಲ್ಲಿ ಚಪ್ಪಲಿ ಇಟ್ಟು ನೀರಿಗೆ ಇಳಿದ್ದಿದ್ದು, ನಾಪತ್ತೆಯಾಗಿದ್ದಾಳೆ ಎನ್ನಲಾಗಿದೆ.

ಸದ್ಯ ಯುವತಿಯ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಯುವತಿ ಎಲ್ಲಿಂದ ಬಂದಿದ್ದಾಳೆ, ಒಬ್ಬಳೇ ಬಂದಿದ್ದಾಳೆಯೇ ಇನ್ನಿತರ ಯಾವುದೇ ಮಾಹಿತಿ ಸಿಕ್ಕಿಲ್ಲ. ಸ್ಥಳದಲ್ಲಿ ಸ್ಥಳೀಯ ಪೊಲೀಸರು ಹಾಗೂ ಅಗ್ನಿಶಾಮಕ ದಳ ಶೋಧ ನಡೆಸುತ್ತಿದ್ದಾರೆ.
ದಕ್ಷಿಣ ಕನ್ನಡ ಹಾಗೂ ಘಟ್ಟಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ನದಿಯು ತುಂಬಿ ಹರಿಯುತ್ತಿದೆ.



























