ವಿಟ್ಲ: ವಿಠ್ಠಲ್ ಜೇಸೀಸ್ ಶಾಲೆಯಲ್ಲಿ ವಿದ್ಯಾರ್ಥಿ ವಿಜ್ಞಾನ ಸಂಘವನ್ನು ಶಾಲೆಯ ಆಡಳಿತ ಮಂಡಳಿಯ ಉಪಾಧ್ಯಕ್ಷ ಡಿ.ಶ್ರೀಧರ ಶೆಟ್ಟಿಯವರು ಉದ್ಘಾಟಿಸಿದರು.

ಆಡಳಿತ ಮಂಡಳಿ ಕಾರ್ಯದರ್ಶಿ ಮೋಹನ್ ಎ. ಮಾತನಾಡಿ, ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಳ್ಳ ಬೇಕು. ಭವಿಷ್ಯದ ಜಗತ್ತಿನ ವಿದ್ಯಮಾನಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಚಿಂತನೆಯಿರಬೇಕು ಎಂದು ತಿಳಿಸಿದರು.

ಶಾಲೆಯ ಪ್ರಾಂಶುಪಾಲ ಜಯರಾಮ್ ರೈ ಮಾತನಾಡಿ, ವರ್ತಮಾನದ ವೈಜ್ಞಾನಿಕ ಆವಿಷ್ಕಾರ, ಸಂಶೋಧನೆಗಳ ಆಧಾರದಲ್ಲಿ ಹೊಸ ಪ್ರಯೋಗಗಳಿಗೆ ವಿಜ್ಞಾನ ಸಂಘ ಸದ್ವಿನಿಯೋಗವಾಗಬೇಕು ಎಂದರು.
ಶಾಲಾ ಆಡಳಿತಾಧಿಕಾರಿ ರಾಧಾಕೃಷ್ಣ ಎ.,ಶಾಲಾ ಆಡಳಿತ ಮಂಡಳಿ ನಿರ್ದೇಶಕ ವಿಜಯ ಪಾಯಸ್ , ಉಪಪ್ರಾಂಶುಪಾಲೆಯರಾದ ಜ್ಯೋತಿ ಶೆಣೈ ಹಾಗೂ ಹೇಮಲತಾ, ಸಹ ಶಿಕ್ಷಕಿ ಎಮಿಲ್ಡಾ ಸೀಮಾ, ಗೀತಾ.ಆರ್, ಗೀತಾ ಕೆ., ಕಂಪ್ಯೂಟರ್ ಶಿಕ್ಷಕಿ ರಶ್ಮಿ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ರಜ್ಮಿಯಾ ಸ್ವಾಗತಿಸಿ, ಪವಿಶ್ ವಂದಿಸಿದರು. ಮನ್ವಿ ಕಾರ್ಯಕ್ರಮ ನಿರೂಪಿಸಿದರು.




























