ಪುತ್ತೂರು: ರಾತ್ರಿ ವೇಳೆ ಪೊಲೀಸರು ರೌಂಡ್ಸ್ ನಲ್ಲಿದ್ದ ಸಂದರ್ಭದಲ್ಲಿ ಮೋಜು-ಮಸ್ತಿಯಲ್ಲಿ ತೊಡಗಿದ್ದ ಯುವಕರನ್ನು ವಶಕ್ಕೆ ಪಡೆದಿದ್ದು, ಇಂದು ಅವರನ್ನು ವೈದ್ಯಕೀಯ ಪರೀಕ್ಷೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢ ಪಟ್ಟಿದ್ದು, ಈ ಹಿನ್ನೆಲೆ ಐವರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂಧಿದೆ.
ಬಂಧಿತರನ್ನು ಪರ್ಪುಂಜ ನಿವಾಸಿ ಕನಿಷ್ಕ ಶೆಟ್ಟಿ, ಬಪ್ಪಳಿಗೆ ಕರ್ಕುಂಜ ಸಿಂಗಾಣಿ ನಿವಾಸಿ ಪ್ರಜ್ವಲ್, ಕೊಡಿಪ್ಪಾಡಿ ದ್ವಾರಕ ನಿವಾಸಿ ಹಿತೇಶ್ ನಾಯ್ಕ್, ಹಾರಾಡಿ ನಂದಿಲ ನಿವಾಸಿ ನವನೀತ್, ಬನ್ನೂರು ನಿವಾಸಿ ಕಿಶನ್ ಕುಮಾರ್ ಎಂದು ಗುರುತಿಸಲಾಗಿದೆ.
ಜು.15 ರಂದು ರಾತ್ರಿ ಪೊಲೀಸರು ರೌಂಡ್ಸ್ ನಲ್ಲಿದ್ದ ಸಂದರ್ಭದಲ್ಲಿ ಐವರು ಯುವಕರು ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಹೀನಾಯವಾಗಿ ಮಾತನಾಡುತ್ತಾ ತೊಂದರೆ ಉಂಟು ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಪುತ್ತೂರು ನಗರ ಠಾಣಾ ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಯುವಕರನ್ನು ವಶಕ್ಕೆ ಪಡೆದಿದ್ದು, ಈ ಬಗ್ಗೆ ಮಾದಕ ವಸ್ತು ಸೇವನೆ ಮಾಡಿರುವ ಸಂಶಯದ ಮೇರೆಗೆ ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಅವರೆಲ್ಲರೂ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿರುವುದಾಗಿ ತಿಳಿದು ಬಂದಿದೆ..
ಈ ಬಗ್ಗೆ ಠಾಣೆಯಲ್ಲಿ ಅ.ಕ್ರ: 63/2022 ಕಲಂ: 27(ಬಿ) ಎನ್.ಡಿ.ಪಿ.ಎಸ್ ಆಕ್ಟ್ ರಂತೆ ಪ್ರಕರಣ ದಾಖಲಾಗಿದೆ..


























