ವಿಟ್ಲ: ಬೋಳಂತೂರು ಗ್ರಾಮದ ತುಳಸೀವನ ಎಂಬಲ್ಲಿ ರಸ್ತೆ ಬದಿ ದ್ವಿಚಕ್ರ ವಾಹನ ನಿಲ್ಲಿಸಿ ಮನೆಗೆ ಹೋಗಲು ಯುವತಿ ಹೊರಡುತ್ತಿದ್ದಂತೆ ಕಲ್ಲಡ್ಕ ಕಡೆಯಿಂದ ಎನ್.ಸಿ.ರೋಡ್ ಕಡೆಗೆ ಬರುತ್ತಿದ್ದ ಇನ್ನೋವಾ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಬಳಿಕ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಗಳಿಗೆ ಡಿಕ್ಕಿ ಹೊಡೆದು ಚರಂಡಿಯಲ್ಲಿ ಇಳಿದ ಘಟನೆ ನಡೆದಿದೆ.

ಅಪಘಾತದಿಂದಾಗಿ ಇನ್ನೋವಾದಲ್ಲಿದ್ದ ಇಬ್ಬರು ಯುವಕರ ಪೈಕಿ ಓರ್ವ ಗಾಯಗೊಂಡಿದ್ದು, ಯುವತಿ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾಳೆ ಎಂದು ತಿಳಿದು ಬಂದಿದೆ..





























