ಪುತ್ತೂರು: ಸಹೋದರನ ಮನೆಗೆ ಬಂದಿದ್ದ ವ್ಯಕ್ತಿಯೋರ್ವರು ನಾಪತ್ತೆಯಾದ ಘಟನೆ ಜು.17 ರಂದು ಕಕ್ಕಪ್ಪಾಡಿ ಸಮೀಪದ ದೇಲಂಪಾಡಿಯಲ್ಲಿ ನಡೆದಿದೆ.
ಮಂಗಳೂರು ನಿವಾಸಿ ಆನಂದ ರೈ(53) ನಾಪತ್ತೆಯಾದ ವ್ಯಕ್ತಿ.

ಆನಂದ ರೈ ರವರು ಮಂಗಳೂರಿನಲ್ಲಿ ಆಟೋ ಚಾಲಕರಾಗಿದ್ದು, ಕಳೆದ ಕೆಲ ದಿನಗಳಿಂದ ಕಕ್ಕಪ್ಪಾಡಿ ಸಮೀಪದ ದೇಲಂಪಾಡಿಯಲ್ಲಿರುವ ತಮ್ಮ ಸಹೋದರನ ಮನೆಯಲ್ಲಿ ವಾಸವಿದ್ದರು.
ಜು.17 ರಂದು ಮುಂಜಾನೆಯಿಂದಲೇ ಆನಂದ್ ರವರು ಮನೆಯಲ್ಲಿ ಕಾಣದೆ ಇದ್ದ ಹಿನ್ನೆಲೆ ಮನೆಯವರು ಸುತ್ತಮುತ್ತ ಎಲ್ಲಾ ಕಡೆ ಹುಡುಕಾಡಿ ಪತ್ತೆಯಾಗದ ಕಾರಣ ಆದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಇದೀಗ ಮನೆಯವರು, ಸ್ಥಳೀಯರು ಮತ್ತು ಪೊಲೀಸರು ಸೇರಿಕೊಂಡು ನಾಪತ್ತೆಯಾದ ಆನಂದ್ ರವರನ್ನು ಹುಡುಕುತ್ತಿದ್ದಾರೆ ಎಂದು ವರದಿಯಾಗಿದೆ..


























